Select Your Language

Notifications

webdunia
webdunia
webdunia
webdunia

ಮಹಾನ್ ಮೆಸ್ಸಿಯ ಸಾಧನೆ ಕೊಂಡಾಡುತ್ತಿದೆ ಜಗತ್ತು

ಮಹಾನ್ ಮೆಸ್ಸಿಯ ಸಾಧನೆ ಕೊಂಡಾಡುತ್ತಿದೆ ಜಗತ್ತು
ಕತಾರ್ , ಸೋಮವಾರ, 19 ಡಿಸೆಂಬರ್ 2022 (09:00 IST)
ಕತಾರ್: ಫ್ರಾನ್ಸ್ ವಿರುದ್ಧ ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಅರ್ಜೈಂಟೀನಾ ತಂಡ ರೋಚಕ ಗೆಲುವು ಸಾಧಿಸಿದೆ. ಈ ಸಾಧನೆಗೆ ಕಾರಣವಾದ ವಿಶ್ವ ಶ್ರೇಷ್ಠ ಆಟಗಾರ ಲಿಯೋನಲ್ ಮೆಸ್ಸಿಯನ್ನು ಕ್ರೀಡಾ ಜಗತ್ತೇ ಕೊಂಡಾಡುತ್ತಿದೆ.

ಒಬ್ಬ ಶ್ರೇಷ್ಠ ಆಟಗಾರ ಶ್ರೇಷ್ಠ ಎನಿಸಿಕೊಳ್ಳುವುದು ತಂಡಕ್ಕಾಗಿ ಮಹತ್ವದ ಸಂದರ್ಭದಲ್ಲಿ ಕೊಡುಗೆ ನೀಡಿದಾಗ. ಅದನ್ನು ಮೆಸ್ಸಿ ನಿನ್ನೆಯ ಪಂದ್ಯದಲ್ಲಿ ಮಾಡಿ ತೋರಿಸಿದ್ದಾರೆ.

ಪಂದ್ಯದ 90 ನಿಮಿಷದ ಅವಧಿಯಲ್ಲಿ ಇತ್ತಂಡಗಳೂ ಒಂದೊಂದು ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ನಂತರದ 30 ನಿಮಿಷದ ಅವಧಿಯಲ್ಲಿ ಮತ್ತೆ ಇತ್ತಂಡಗಳೂ ಒಂದೊಂದು ಗೋಲು ಗಳಿಸಿದವು. ಆದರೆ ಪೆನಾಲ್ಟಿ ಶೂಟೌಟ್‍ ನಲ್ಲಿ ಗೆಲುವು ಅರ್ಜೈಂಟೀನಾ ಪಾಲಾಯಿತು. ಲಿನೋನಲ್ ಮೆಸ್ಸಿ ಎರಡು ಗೋಲು ಗಳಿಸಿ ಗೆಲುವಿಗೆ ಕಾರಣವಾದರು. ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೈಂಟೀನಾ ಒಟ್ಟು ನಾಲ್ಕು ಗೋಲು ಗಳಿಸಿದರೆ ಫ್ರಾನ್ಸ್ 2 ಗೋಲು ಗಳಿಸಲಷ್ಟೇ ಶಕ್ತವಾಯಿತು.

ಇದರೊಂದಿಗೆ ಅರ್ಜೈಂಟೀನಾ ಮೂರನೇ ಬಾರಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತು. ಅತ್ತ ಫ್ರಾನ್ಸ್ ಗೆ ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ಅವಕಾಶ ಇಲ್ಲವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಶತಕ ಸಿಡಿಸಿ ಶುಬ್ನಂ ಗಿಲ್, ವಿಕೆಟ್ ಪಡೆದ ಕುಲದೀಪ್ ಯಾದವ್ ಗೆ ಮುಂದಿನ ಪಂದ್ಯಕ್ಕೆ ಕೊಕ್?