Select Your Language

Notifications

webdunia
webdunia
webdunia
webdunia

ಏಕದಿನ ಸರಣಿಗೆ ಮೊದಲು ಇಂಗ್ಲೆಂಡ್ ತಂಡಕ್ಕೆ ಆಘಾತ

ಏಕದಿನ ಸರಣಿಗೆ ಮೊದಲು ಇಂಗ್ಲೆಂಡ್ ತಂಡಕ್ಕೆ ಆಘಾತ
ಪುಣೆ , ಸೋಮವಾರ, 22 ಮಾರ್ಚ್ 2021 (10:23 IST)
ಪುಣೆ: ಟೀಂ ಇಂಡಿಯಾ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಮೊದಲು ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆಘಾತವೊಂದು ಸಿಕ್ಕಿದೆ.

 
ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಕಾಡಿದ್ದ ವೇಗಿ ಜೋಫ್ರಾ ಆರ್ಚರ್ ಗಾಯಗೊಂಡಿದ್ದು ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಟಿ20 ಸರಣಿಯಲ್ಲಿ ಆರ್ಚರ್ ಹಾಗೂ ಕ್ರಿಸ್ ಜೋರ್ಡಾನ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಇಬ್ಬರೂ ರನ್ ನಿಯಂತ್ರಿಸುತ್ತಿದ್ದರು.

ಆದರೆ ಈಗ ಟೆಸ್ಟ್, ಟಿ20 ಸರಣಿ ಸೋತು ಏಕದಿನ ಸರಣಿ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ಹವಣಿಕೆಯಲ್ಲಿರುವ ಇಂಗ್ಲೆಂಡ್ ತಂಡಕ್ಕೆ ಆರ್ಚರ್ ನಿರ್ಗಮನ ದೊಡ್ಡ ಹೊಡೆತ ನೀಡಲಿದೆ. ಬಲ ಮಣಿಗಂಟಿನ ನೋವಿಗೆ ತುತ್ತಾಗಿರುವ ಆರ್ಚರ್ ಇಂಗ್ಲೆಂಡ್ ಗೆ ಮರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಡ್ ಸೇಫ್ಟೀ ಟೂರ್ನಮೆಂಟ್ ಫೈನಲ್ ಗೆದ್ದ ಭಾರತ