Publish Date: Sat, 26 Dec 2020 (10:44 IST)
Updated Date: Sat, 26 Dec 2020 (10:46 IST)
ಮುಂಬೈ: 2020 ರ ಗರಿಷ್ಠ ವೇತನ ಗಳಿಕೆ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನೂ ಮೀರಿದ ವೇಗಿ ಜಸ್ಪ್ರೀತ್ ಬುಮ್ರಾ ನಂ.1 ಸ್ಥಾನದಲ್ಲಿದ್ದಾರೆ.
ಬಿಸಿಸಿಐ ನೀಡುವ ಎ ಪ್ಲಸ್ ಶ್ರೇಣಿಯಲ್ಲಿರುವ ಬುಮ್ರಾ ಈ ವರ್ಷ ಒಟ್ಟಾರೆ 1.38 ಕೋಟಿ ರೂ. ವೇತನ ಗಳಿಸಿದ್ದು, ಅಗ್ರ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ 1.29 ಕೋಟಿ ರೂ.ಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಒಂದು ವೇಳೆ ಕೊಹ್ಲಿ ಪೂರ್ಣ ಪ್ರಮಾಣದಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಆಡುತ್ತಿದ್ದರೆ, ಅವರೇ ನಂ.1 ಎನಿಸಿಕೊಳ್ಳುತ್ತಿದ್ದರು. 96 ಲಕ್ಷ ಪಡೆದಿರುವ ರವೀಂದ್ರ ಜಡೇಜಾ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು, ಈ ವರ್ಷ ಬಹುತೇಕ ಗಾಯದಿಂದಾಗಿ ತಂಡದಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಅಗ್ರ 5 ರೊಳಗೂ ಸ್ಥಾನ ಪಡೆದಿಲ್ಲ.