Select Your Language

Notifications

webdunia
webdunia
webdunia
webdunia

ಸಿಡ್ನಿ ಕೊರೋನಾ ಹಾಟ್ ಸ್ಪಾಟ್: ರೋಹಿತ್ ಶರ್ಮಾಗೆ ಇನ್ನೊಂದು ಕ್ವಾರಂಟೈನ್?!

ಸಿಡ್ನಿ ಕೊರೋನಾ ಹಾಟ್ ಸ್ಪಾಟ್: ರೋಹಿತ್ ಶರ್ಮಾಗೆ ಇನ್ನೊಂದು ಕ್ವಾರಂಟೈನ್?!
ಸಿಡ್ನಿ , ಶನಿವಾರ, 26 ಡಿಸೆಂಬರ್ 2020 (10:07 IST)
ಸಿಡ್ನಿ: ಆಸ್ಟ್ರೇಲಿಯಾ ಸರಣಿಯಲ್ಲಿ ಪಾಲ್ಗೊಳ್ಳಲು ಸಿಡ್ನಿಗೆ ಬಂದಿಳಿದಿರುವ ರೋಹಿತ್ ಶರ್ಮಾ ಸದ್ಯಕ್ಕೆ ಇಲ್ಲಿ ಕ್ವಾರಂಟೈನ್ ಅವಧಿ ಪೂರೈಸುತ್ತಿದ್ದಾರೆ. ಈ ನಡುವೆ ಇಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿರುವುದರಿಂದ ಮೆಲ್ಬೋರ್ನ್ ನಲ್ಲಿ ಅವರು ಮತ್ತೆ ಕ್ವಾರಂಟೈನ್ ಗೊಳಗಾಗಲಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.


ಒಂದು ವೇಳೆ ಕೊರೋನಾ ಹಾವಳಿ ಮಿತಿಮೀರಿದರೆ ಮೂರನೇ ಟೆಸ್ಟ್ ನ್ನು ಸಿಡ್ನಿಯಿಂದ ಮೆಲ್ಬೋರ್ನ್ ಗೆ ಸ್ಥಳಾಂತರಿಸುವ ಸಾಧ‍್ಯತೆಯಿದೆ. ಇಂತಹ ಸಂದರ್ಭದಲ್ಲಿ ರೋಹಿತ್ ಮೆಲ್ಬೋರ್ನ್ ಗೆ ತೆರಳಿ ಮತ್ತೆ ಕ್ವಾರಂಟೈನ್ ಗೊಳಗಾಗಬೇಕೇ ಎಂಬ ಅನುಮಾನಗಳಿತ್ತು. ಆದರೆ ಮೂಲಗಳ ಪ್ರಕಾರ ರೋಹಿತ್ ರನ್ನು ಮತ್ತೆ ಕ್ವಾರಂಟೈನ್ ಗೆ ಒಳಗಾಗಿಸುವ ಸಾಧ‍್ಯತೆ ಕಡಿಮೆ. ಮತ್ತೆ ಕ್ವಾರಂಟೈನ್ ಎಂದರೆ ರೋಹಿತ್ ಮೂರನೇ ಟೆಸ್ಟ್ ನಲ್ಲಿ ಪಾಲ್ಗೊಳ್ಳಲು ಕಷ್ಟವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸೀಸ್ ಟೆಸ್ಟ್: ಅಜಿಂಕ್ಯಾ ರೆಹಾನೆ ಕಣ್ಣೋ? ಕ್ಯಾಮರಾವೋ?