Select Your Language

Notifications

webdunia
webdunia
webdunia
webdunia

ಧೋನಿ ಈ ನಟಿ ಜತೆ ಡೇಟಿಂಗ್ ಮಾಡಿದ್ದು ನಿಜವೇ?!

ಧೋನಿ ಈ ನಟಿ ಜತೆ ಡೇಟಿಂಗ್ ಮಾಡಿದ್ದು ನಿಜವೇ?!
ಮುಂಬೈ , ಮಂಗಳವಾರ, 5 ಸೆಪ್ಟಂಬರ್ 2017 (09:59 IST)
ಮುಂಬೈ: ಕ್ರಿಕೆಟಿಗ ಧೋನಿ ಬ್ಯಾಚುಲರ್ ಆಗಿದ್ದಾಗ  ಅವರ ಹೆಸರು ಹಲವು ಬಾಲಿವುಡ್ ನಟಿಯರ ಜತೆ  ಥಳುಕು ಹಾಕಿಕೊಂಡಿತ್ತು. ಅವರಲ್ಲೊಬ್ಬರು ಲಕ್ಷ್ಮೀ ರೈ.

 
ಲಕ್ಷ್ಮೀ ರೈ ಜತೆ ಧೋನಿ ಕ್ಲೋಸ್ ಆಗಿದ್ದರು. ಇಬ್ಬರೂ ಡೇಟಿಂಗ್ ನಡೆಸಿದ್ದರು ಎಂದೆಲ್ಲಾ ಗುಸು ಗುಸು ಇಂದಿಗೂ ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ಅದರ ಬಗ್ಗೆ ಸ್ವತಃ ಲಕ್ಷ್ಮೀ ರೈ ಸ್ಪಷ್ಟನೆ ಕೊಟ್ಟಿದ್ದಾರೆ.

ಜೂಲಿ 2 ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಸೆನ್ಸೇಷನ್ ಸೃಷ್ಟಿಸಲು ಹೊರಟಿರುವ ಲಕ್ಷ್ಮಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಮ್ಮ ಮತ್ತು ‘ಆ’ ಕ್ರಿಕೆಟಿಗನ ಜತೆಗಿನ ಸಂಬಂಧದ ಬಗ್ಗೆ ಬಿಚ್ಚಿಟ್ಟಿದ್ದಾರೆ.

‘ನಾವಿಬ್ಬರೂ ಸುಮಾರು ಒಂದು ವರ್ಷ ಕ್ಲೋಸ್ ಆಗಿದ್ದೆವು. ನಮ್ಮ ನಡುವೆ ಉತ್ತಮ ಸ್ನೇಹವಿತ್ತು. ಆದರೆ ಇಬ್ಬರೂ ಮದುವೆ ಮಾತುಕತೆ ನಡೆಸಿರಲಿಲ್ಲ. ಅದೆಲ್ಲಾ ಸರಿ ಹೋಗಲ್ಲ ಎಂದು ನಮಗೆ ಅರಿವಾದಾಗ ಎಲ್ಲಾ ಅಲ್ಲಿಗೇ ಬಿಟ್ಟು ಮುನ್ನಡೆಯಲು ತೀರ್ಮಾನಿಸಿದೆವು’ ಎಂದು ಲಕ್ಷ್ಮೀ ಹೇಳಿದ್ದಾರೆ.

ಇದನ್ನೂ ಓದಿ.. ಸರಣಿ ಗೆದ್ದರೂ ಕೊಹ್ಲಿ ಅಸಮಾಧಾನ ಮುಗಿದಿಲ್ಲ! ಕಾರಣವೇನು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸರಣಿ ಗೆದ್ದರೂ ಕೊಹ್ಲಿ ಅಸಮಾಧಾನ ಮುಗಿದಿಲ್ಲ! ಕಾರಣವೇನು?