Publish Date: Mon, 04 Sep 2017 (09:20 IST)
Updated Date: Mon, 04 Sep 2017 (09:24 IST)
ಕೊಲೊಂಬೊ: ವಿಶ್ವದ ಅತೀ ಶ್ರೀಮಂತ ಕ್ರಿಕೆಟಿಗರ ಪೈಕಿ ಒಬ್ಬರಾದ ಧೋನಿ ಭಾನುವಾರ ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಚಾಲಕರಾದರು!
ತಮ್ಮ ತಂಡದ ಆಟಗಾರರನ್ನು ಹೊತ್ತುಕೊಂಡ ಮಿನಿ ವ್ಯಾನ್ ನ ಚಾಲಕರಾದರು. ತಮ್ಮ ಸಹ ಆಟಗಾರರನ್ನು ಸ್ಟೇಡಿಯಂನ ಸುತ್ತ ಒಂದು ಸುತ್ತು ಹೊಡೆಸಿ ಮಜಾ ಮಾಡಿದರು.
ಇದು ನಡೆದಿದ್ದು ಐದನೇ ಪಂದ್ಯದ ಪ್ರಶಸ್ತಿ ಸಮಾರಂಭ ಮುಗಿದ ಮೇಲೆ. ಆಟಗಾರರನ್ನೆಲ್ಲಾ ಕೂರಿಸಿಕೊಂಡು ಧೋನಿ ಜಾಲಿ ರೈಡ್ ಮಾಡಿದರು. ವಾಹನದ ಒಳಗಿನ ಸೀಟು ಮಾತ್ರವಲ್ಲ, ಟಾಪ್ ಮೇಲೆ, ಬಾಗಿಲಲ್ಲಿ ನೇತಾಡಿಕೊಂಡು ಧೋನಿ ಜತೆ ಆಟಗಾರರು ಜಾಲಿ ರೈಡ್ ಮುಗಿಸಿದರು.
ಅಂದ ಹಾಗೆ, ಹಿಂದೆಲ್ಲಾ ಧೋನಿ ಸರಣಿ ಶ್ರೇಷ್ಠರಾಗಿ ಯಾರೇ ಬೈಕ್ ಗೆದ್ದರೂ, ಒಮ್ಮೆ ಅವರನ್ನು ಹಿಂದೆ ಕೂರಿಸಿಕೊಂಡು ಮೈದಾನದಲ್ಲಿ ಒಂದು ರೌಂಡ್ ರೈಡ್ ಮಾಡುತ್ತಿದ್ದುದು ನಿಮಗೆ ನೆನಪಿರಬಹುದು.