ಗಯಾನ: ಐಸಿಸಿ ಟ್ವೆಂಟಿ 20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ಮತ್ತು ಭಾರತ ನಡುವಿನ ಸೆಮಿಫೈನಲ್ ಪಂದ್ಯಾಟಕ್ಕೆ ಮಳೆ ಅಡ್ಡಿಯಾಗಿದೆ.
ಟಾಸ್ 7.30ಕ್ಕೆ ನಿಗದಿಯಾಗಿದ್ದು ಮಳೆಯಿಂದಾಗಿ ಪಂದ್ಯ ಆರಂಭಗೊಂಡಿಲ್ಲ. ಇನ್ನೂ ಈ ಪಂದ್ಯ ಭಾರತ ಮತ್ತು ಇಂಗ್ಲೆಂಡ್‌ಗೆ ತುಂಬಾನೇ ಮುಖ್ಯವಾಗಿದ್ದು, ಈ ಪಂದ್ಯದಲ್ಲಿ ವಿನ್ ಆಗುವ ತಂಡ ಫೈನಲ್‌ಗೆ ಪ್ರವೇಶಸಲಿದೆ.
ಈ ಪಂದ್ಯಾಟದಲ್ಲಿ ಗೆಲ್ಲುವ ತಂಡ ಈಗಾಗಲೇ ಫೈನಲ್‌ಗೆ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಇನ್ನೂ ವಿಶೇಷ ಏನೆಂದರೆ ದಕ್ಷಿಣ ಆಫ್ರಿಕಾ ಮೊದಲ ಭಾರಿಗೆ ಐಸಿಸಿ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದು.
ಬೆಳಿಗ್ಗೆ ನಡೆದ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 9 ವಿಕೆಟ್‌ಗಳಿಂದ ಅಫ್ಗಾನಿಸ್ತಾನ ತಂಡವನ್ನು ಸುಲಭವಾಗಿ ಮಣಿಸಿ ಮೊದಲ ಬಾರಿ ಫೈನಲ್‌ಗೆ ಲಗ್ಗೆಯಿಟ್ಟಿತು.