Select Your Language

Notifications

webdunia
webdunia
webdunia
webdunia

T20 World Cup 2024: ಐಸಿಸಿ ಟ್ರೋಫಿ ಫೈನಲ್ ಗೇರಿ ಇತಿಹಾಸ ಸೃಷ್ಟಿಸಿದ ದ ಆಫ್ರಿಕಾ

South Africa

Krishnaveni K

ಟ್ರಿನಿಡಾಡ್ , ಗುರುವಾರ, 27 ಜೂನ್ 2024 (08:50 IST)
ಟ್ರಿನಿಡಾಡ್: ಟಿ20 ವಿಶ್ವಕಪ್ 2024 ರಲ್ಲಿ ಅಫ್ಘಾ ನಿಸ್ತಾನ ವಿರುದ್ಧ 9 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡ ದ ಆಫ್ರಿಕಾ ಇದೇ ಮೊದಲ ಬಾರಿಗೆ ಐಸಿಸಿ ಟ್ರೋಫಿ ಫೈನಲ್ ಗೇರಿ ಇತಿಹಾಸ ನಿರ್ಮಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 11.5 ಓವರ್ ಗಳಲ್ಲಿ ಕೇವಲ 56 ರನ್ ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾದಂತಹ ದೈತ್ಯ ಪ್ರತಿಭೆಯನ್ನು ಬಗ್ಗು ಬಡಿದ ಅಫ್ಘಾನಿಸ್ತಾನ ಈ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿ ನಿರಾಸೆ ಮೂಡಿಸಿತು. ಅಜ್ಮತ್ತುಲ್ಲಾ 10 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಎರಡಂಕಿ ಮೊತ್ತವೂ ಬರಲಿಲ್ಲ. ಆಫ್ರಿಕಾ ಪರ ಮಾರ್ಕೊ ಜ್ಯಾನ್ಸನ್, ಶಂಸಿ ತಲಾ 3, ರಬಾಡ, ನೋರ್ಟ್ಜೆ ತಲಾ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನುತ್ತಿದ ಆಫ್ರಿಕಾ ಕೇವಲ 8.5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಕ್ವಿಂಟನ್ ಡಿ ಕಾಕ್ 5  ರನ್ ಗಳಿಸಿ ಫಾರುಖ್ ಗೆ ವಿಕೆಟ್ ಒಪ್ಪಿಸಿದರು.  ಹೆಂಡ್ರಿಕ್ಸ್ ಅಜೇಯ 29, ಆಡನ್ ಮಾರ್ಕರಮ್ ಅಜೇಯ 23 ರನ್ ಗಳಿಸಿದರು.

ಈ ಗೆಲುವಿನೊಂದಿಗೆ ದ ಆಫ್ರಿಕಾ ಹಲವು ದಾಖಲೆ ಮಾಡಿದೆ. ಟಿ20 ಕ್ರಿಕೆಟ್ ನಲ್ಲಿ ಸತತ 8 ಪಂದ್ಯಗಳನ್ನು ಗೆದ್ದು ದಾಖಲೆ ಮಾಡಿದೆ. ದ ಆಫ್ರಿಕಾ ಇದುವರೆಗೆ 8 ಬಾರಿ ನಾಕೌಟ್ ಹಂತಕ್ಕೇರಿದ್ದು ಈ ಪೈಕಿ 6 ಬಾರಿ ಸೋಲು, 1 ಬಾರಿ ಟೈ ಆಗಿತ್ತು. ಇದೀಗ ಮೊದಲ ಬಾರಿಗೆ ನಾಕೌಟ್ ಹಂತದಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಕ್ರಿಕೆಟ್ ಶ್ರೇಯಾಂಕದಲ್ಲಿ ನಂ.1 ಪಟ್ಟ ಕಳೆದುಕೊಂಡ ಸೂರ್ಯಕುಮಾರ್ ಯಾದವ್