ದುಬೈ: ಇಂದಿನ ಹೈವೋಲ್ಟೇಜ್ ಚಾಂಪಿಯನ್ ಟ್ರೋಫಿ ಕ್ರಿಕೆಟ್‌ನಲ್ಲಿ ಭಾರತ ಮ್ತತು ಪಾಕಿಸ್ತಾನ ಮುಖಾಮುಖಿಯಾಗಲಿದೆ. ಟಾಸ್ ಗೆದ್ದಿರುವ ಪಾಕಿಸ್ತಾನ, ಬ್ಯಾಟಿಂಗ್ ಆಯ್ದು, ಭಾರತವನ್ನು ಫೀಲ್ಡಿಂಗ್‌ಗೆ ಆಹ್ವಾನಿಸಿದೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ ಹೊರಗೆ ಸೇರಿರುವ ಅಪಾರ ಪ್ರಮಾಣದ ಅಭಿಮಾನಿಗಳು ಭಾರತ ಗೆಲುವಿನ ನಿರೀಕ್ಷೆಯಲ್ಲಿದೆ. ಭಾರತದ ಗೆಲುವಿಗಾಗಿ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿರುವ ಘಟನೆಗಳು ನಡೆಯುತ್ತಿದೆ.
ಇಂದಿನ ಪಂದ್ಯಾಟ ಪಾಕಿಸ್ತಾನ ತಂಡಕ್ಕೆ ಪ್ರಮುಖವಾಗಿದ್ದು, ಈ ಮ್ಯಾಚ್ ಸೋತಲ್ಲಿ ಚಾಂಪಿಯನ್ ಟ್ರೋಫಿಯಿಂದ ಹೊರಬೀಳಲಿದೆ.
ಆದ್ದರಿಂದ ಗೆಲುವಿನ ಹುಮ್ಮಸ್ಸಿನಲ್ಲೇ ಇದೀಗ ಪಾಕ್ ಮೈದಾನಕ್ಕೆ ಇಳಿದಿದೆ.