Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದ ಇಂದಿನ ಯಶಸ್ಸಿಗೆ ಕಪಿಲ್ ದೇವ್ ಕಾರಣವಾಗಿದ್ದು ಹೇಗೆ ಗೊತ್ತಾ?

ಟೀಂ ಇಂಡಿಯಾದ ಇಂದಿನ ಯಶಸ್ಸಿಗೆ ಕಪಿಲ್ ದೇವ್ ಕಾರಣವಾಗಿದ್ದು ಹೇಗೆ ಗೊತ್ತಾ?
ಮುಂಬೈ , ಬುಧವಾರ, 25 ಅಕ್ಟೋಬರ್ 2017 (08:58 IST)
ಮುಂಬೈ: ಟೀಂ ಇಂಡಿಯಾದಲ್ಲಿ ಇಂದು ಗ್ರಾಮೀಣ ಭಾಗದಿಂದ ಪ್ರತಿಭೆಗಳೂ ಮಿಂಚುತ್ತಿದ್ದಾರೆ. ಇದಕ್ಕೆ ಕಾರಣ ಕಪಿಲ್ ದೇವ್ ಎಂದು ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

 
ಟೀಂ ಇಂಡಿಯಾದಲ್ಲಿ ಇಂದು ಕೇವಲ ಸುಸಜ್ಜಿತ ನಗರಗಳಿಂದ ಬಂದ ಕ್ರಿಕೆಟಿಗರಿಗಿಂತ ಗ್ರಾಮೀಣ ಭಾಗದ ಆಟಗಾರರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಇಂತಹ ಟ್ರೆಂಟ್ ಸೃಷ್ಟಿಸಿದ್ದು ಕಪಿಲ್ ದೇವ್.

ಅವರು ಹರಿಯಾಣದ ಸಣ್ಣ ಗ್ರಾಮದಿಂದ ಬಂದು ದೊಡ್ಡ ಸಾಧನೆ ಮಾಡಿದರು. ಇದು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸ್ಪೂರ್ತಿಯಾಯಿತು. ತಾನು ಎಲ್ಲಿಂದ ಬಂದೆ ಎನ್ನುವುದು ಮುಖ್ಯವಲ್ಲ ಎಂದು ಕಪಿಲ್ ಇತರ ಪ್ರತಿಭೆಗಳಿಗೆ ಸಾಧಿಸಿ ತೋರಿಸಿಕಕೊಟ್ಟರು ಎಂದು ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗವಾಸ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ ನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆ…?