Select Your Language

Notifications

webdunia
webdunia
webdunia
webdunia

ದೆಹಲಿ ರಣಜಿ ತಂಡಕ್ಕೆ ಶಾಕ್ ಕೊಟ್ಟ ಗೌತಮ್ ಗಂಭೀರ್

ಗೌತಮ್ ಗಂಭೀರ್
ನವದೆಹಲಿ , ಶನಿವಾರ, 23 ಸೆಪ್ಟಂಬರ್ 2017 (07:45 IST)
ನವದೆಹಲಿ: ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ರಣಜಿ ಋತು ಆರಂಭಕ್ಕೂ ಮೊದಲೇ ದೆಹಲಿ  ತಂಡಕ್ಕೆ ಶಾಕ್ ಕೊಟ್ಟಿದ್ದಾರೆ.


 
ದೆಹಲಿ ತಂಡದ ನಾಯಕರಾಗಿದ್ದ ಗಂಭೀರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಬದಲಿಗೆ ಟೀಂ ಇಂಡಿಯಾದ ಇನ್ನೊಬ್ಬ ಆಟಗಾರ ಇಶಾಂತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಸಂಪೂರ್ಣವಾಗಿ ಒಬ್ಬ ಆಟಗಾರನಾಗಿ ತೊಡಗಿಸಿಕೊಳ್ಳಲು ಬಯಸುವುದರಿಂದ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯುವುದಾಗಿ ಗಂಭೀರ್ ದೆಹಲಿ ಕ್ರಿಕೆಟ್ ಸಂಸ್ಥೆಗೆ ಬರೆದ ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ. ಇದಲ್ಲದೆ, ಕೋಚ್ ಕೆಪಿ ಬಾಸ್ಕರ್ ಮತ್ತು ಗಂಭೀರ್ ನಡುವಿನ ಸಂಬಂಧ ಹಳಸಿರುವುದೂ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.

ಇದನ್ನೂ ಓದಿ.. ನೀವು ಏನಾದ್ರೂ ಮಾಡ್ಕೊಳ್ಳಿ, ಕಾಶ್ಮೀರ ವಿಷ್ಯದಲ್ಲಿ ನಾವು ಬರಲ್ಲ ಎಂದ ಚೀನಾ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಣಕಲು ಬಂದ ಕುಲದೀಪ್ ಯಾದವ್ ಗೆ ಡೇವಿಡ್ ವಾರ್ನರ್ ತಿರುಗೇಟು