Publish Date: Fri, 11 Oct 2019 (09:53 IST)
Updated Date: Fri, 11 Oct 2019 (09:55 IST)
ನವದೆಹಲಿ: ಹಾಲಿ ಕ್ರಿಕೆಟಿಗರ ಪೈಕಿ ಶ್ರೇಷ್ಟ ಬ್ಯಾಟ್ಸ್ ಮನ್ ಯಾರು ಎಂದು ಕೇಳಿದರೆ ಎಲ್ಲರೂ ಹೇಳುವುದು ವಿರಾಟ್ ಕೊಹ್ಲಿ ಅಥವಾ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹೆಸರು. ಆದರೆ ಗೌತಮ್ ಗಂಭೀರ್ ಪ್ರಕಾರ ಇವರು ಯಾರೂ ಅಲ್ಲವಂತೆ!
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರಕಾರ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಎಂದರೆ ರೋಹಿತ್ ಶರ್ಮಾ ಅಂತೆ. ರೋಹಿತ್ ಅತ್ಯುತ್ತಮ ಆಟಗಾರ ಎಂಬುದು ಗಂಭೀರ್ ಅಭಿಪ್ರಾಯ.
ಸದಾ ಕೊಹ್ಲಿಯನ್ನು ಟೀಕಿಸುವ ಗಂಭೀರ್ ಈ ಅಭಿಪ್ರಾಯ ಅಚ್ಚರಿಯೇನೂ ಅಲ್ಲ. ‘ರೋಹಿತ್ ನ್ಯಾಚುರಲ್ ಆಟ ಆಡಲು ಹೇಳಿದಾಗ ಟೆಸ್ಟ್ ಇರಲಿ, ಏಕದಿನ ಇರಲಿ ಪ್ರತೀ ಬಾರಿ ಅವರೇ ಪಂದ್ಯ ಪುರುಷರಾಗುತ್ತಾರೆ. ಅದೃಷ್ಟವಶಾತ್ ಅವರು ಟೆಸ್ಟ್ ಕ್ರಿಕೆಟ್ ಎಂದಾಗ ಸಂಪ್ರದಾಯ ಪ್ರಕಾರ ಡಿಫೆನ್ಸಿವ್ ಕ್ರಿಕೆಟ್ ಆಡಲು ಹೋಗೋದಿಲ್ಲ. ಅವರ ನ್ಯಾಚುರಲ್ ಆಟ ಆಡುವ ಕಾರಣ ಯಶಸ್ಸು ಗಳಿಸುತ್ತಾರೆ. ನನ್ನ ಪ್ರಕಾರ ಅವರೇ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.