Publish Date: Fri, 11 Oct 2019 (09:48 IST)
Updated Date: Fri, 11 Oct 2019 (09:50 IST)
ಪುಣೆ: ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಶತಕ ಸಿಡಿಸಿದ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಎರಡೆರಡು ಶತಕ ಸಿಡಿಸಲು ಸಾಧ‍್ಯವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
‘ಸತತ ಎರಡು ಶತಕಗಳ ಸಾಧನೆ ನಿಜಕ್ಕೂ ಸಂತಸವಾಗಿದೆ. ಅದಕ್ಕಿಂತ ಹೆಚ್ಚಾಗಿ ತಂಡ ಉತ್ತಮ ಸ್ಥಿತಿಯಲ್ಲಿದೆ ಎನ್ನುವುದೇ ಹೆಚ್ಚು ಖುಷಿ ಸಂಗತಿ. ಸುಲಭವಾಗಿ ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಲೂಸ್ ಬಾಲ್ ಗಳಿಗೆ ಕಾದು ಶಾಟ್ ಹೊಡೆಯಬೇಕಿತ್ತು.
400 ರಿಂದ 500 ಮೊತ್ತ ಗಳಿಸಿದರೆ ದ.ಆಫ್ರಿಕಾಗೆ ಪೈಪೋಟಿ ನೀಡಬಹುದು. ನಾವು ಎದುರಾಳಿಗಳನ್ನು ಒತ್ತಡಕ್ಕೆ ಸಿಲುಕಿಸಲು ಇಷ್ಟು ಮೊತ್ತ ಸಾಕು. ದ್ವಿತೀಯ ಬಾರಿ ನಮಗೆ ಬ್ಯಾಟಿಂಗ್ ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ’ ಎಂದು ಮಯಾಂಕ್ ಅಗರ್ವಾಲ್ ಪಂದ್ಯದ ನಂತರ ಹೇಳಿದ್ದಾರೆ.