Publish Date: Sat, 02 Nov 2019 (07:26 IST)
Updated Date: Sat, 02 Nov 2019 (07:27 IST)
ಮುಂಬೈ: ವಿಶ್ವಕಪ್ ವೇಳೆ ಆಯ್ಕೆ ಸಮಿತಿ ಸದಸ್ಯರು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಚಹಾ ಸರಬರಾಜು ಮಾಡುತ್ತಿದ್ದರು ಎಂಬ ಕಾಮೆಂಟ್ ಬಗ್ಗೆ ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ಸ್ಪಷ್ಟನೆ ನೀಡಿದ್ದಾರೆ.
ಫಾರುಖ್ ಇಂತಹದ್ದೊಂದು ಕಾಮೆಂಟ್ ಮಾಡುತ್ತಿದ್ದಂತೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಅನುಷ್ಕಾ ಸುಖಾ ಸುಮ್ಮನೇ ನನ್ನ ಹೆಸರು ಕ್ರಿಕೆಟ್ ವಿಚಾರದಲ್ಲಿ ಎಳೆದು ತರಬೇಡಿ ಎಂದು ತಿರುಗೇಟು ನೀಡಿದ್ದರು.
ಅನುಷ್ಕಾರ ಪ್ರತಿಕ್ರಿಯೆ ನಂತರ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಫಾರುಖ್ ಅನುಷ್ಕಾ ಹೆಸರನ್ನು ಆಯ್ಕೆ ಸಮಿತಿ ಸದಸ್ಯರ ಬಗ್ಗೆ ವ್ಯಂಗ್ಯ ಮಾಡಲು ಬಳಸಿದ್ದೆನಷ್ಟೇ ಎಂದಿದ್ದಾರೆ.