ಭಾರತ-ಬಾಂಗ್ಲಾ ದೆಹಲಿ ಟಿ20 ಪಂದ್ಯದಲ್ಲಿ ಬದಲಾವಣೆಯಿಲ್ಲ ಎಂದ ಗಂಗೂಲಿ

ಶುಕ್ರವಾರ, 1 ನವೆಂಬರ್ 2019 (08:51 IST)
ನವದೆಹಲಿ: ಕಳಪೆ ವಾತಾವರಣದಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ದೆಹಲಿಯಲ್ಲಿ ನಡೆಯಲಿರುವ ಟಿ20 ಪಂದ್ಯವನ್ನು ಬೇರೆಡೆ ಸ್ಥಳಾಂತರಿಸಬೇಕು ಎಂಬ ಒತ್ತಾಯಗಳಿಗೆ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.


ಭಾರತ-ಬಾಂಗ್ಲಾ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವ ಯೋಚನೆಯಿಲ್ಲ. ಈಗ ಯೋಜನೆ ಮಾಡಿದಂತೇ ಪಂದ್ಯ ಅಲ್ಲಿಯೇ ನಡೆಯಲಿದೆ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಪರಿಸರವಾದಿಗಳು ದೆಹಲಿಯಲ್ಲಿ ಭಾನುವಾರ ನಡೆಯಲಿರುವ ಪಂದ್ಯವನ್ನು ಆರೋಗ್ಯದ ದೃಷ್ಟಿಯಿಂದ ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿರುವ ಗಂಗೂಲಿ ದೆಹಲಿಯಲ್ಲೇ ಪಂದ್ಯ ನಡೆಯಲಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೌರವ್ ಗಂಗೂಲಿ ನಿರ್ಧಾರಕ್ಕೆ ಸಚಿನ್ ತೆಂಡುಲ್ಕರ್ ಬೆಂಬಲ