Publish Date: Thu, 01 Oct 2020 (09:40 IST)
Updated Date: Thu, 01 Oct 2020 (09:41 IST)
ರಾಂಚಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಧೋನಿ ಮುಂದಿನ ದಿನಗಳಲ್ಲಿ ಬಣ್ಣದ ಲೋಕಕ್ಕೆ ಕಾಲಿಡಲಿರುವುದು ಪಕ್ಕಾ ಆಗಿದೆ.
2019 ರಲ್ಲಿ ಧೋನಿ ತಮ್ಮದೇ ಧೋನಿ ಎಂಟರ್ ಟೈನ್ ಮೆಂಟ್ ಬ್ಯಾನರ್ ಲಾಂಚ್ ಮಾಡಿದ್ದರು. ಜತೆಗೆ ರೋರ್ ಆಫ್ ದಿ ಲಯನ್ ಎಂಬ ವೆಬ್ ಸೀರೀಸ್ ನ್ನೂ ನಿರ್ಮಿಸಿದ್ದರು. ಇದೀಗ ಧೋನಿ ಬ್ಯಾನರ್ ನ ಹೊಸ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಉದಯೋನ್ಮುಖ ಬರಹಗಾರರೊಬ್ಬರ ಇನ್ನೂ ಪ್ರಕಟವಾಗದ ಪುಸ್ತಕವೊಂದರ ಹಕ್ಕು ಪಡೆದಿದ್ದೇವೆ. ಸದ್ಯದಲ್ಲೇ ಹೊಸ ಪ್ರಾಜೆಕ್ಟ್ ಘೋಷಿಸಲಿದ್ದೇವೆ ಎಂದು ಧೋನಿ ಪತ್ನಿ ಸಾಕ್ಷಿ ಬಹಿರಂಗಪಡಿಸಿದ್ದಾರೆ. ಇದು ಪೌರಾಣಿಕ ಕತೆಯಾಗಲಿದೆ ಎಂಬ ಸುದ್ದಿಯಿದೆ. ಹೀಗಾಗಿ ಐಪಿಎಲ್ ಮುಗಿದೊಡನೆ ಧೋನಿ ತಮ್ಮ ಹೋಂ ಬ್ಯಾನರ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಪಕ್ಕಾ ಆಗಿದೆ.