Select Your Language

Notifications

webdunia
webdunia
webdunia
webdunia

ವಿದೇಶಿ ಪ್ರವಾಸಗಳಲ್ಲಿ ಧೋನಿ ತುಂಬಾ ನಾಚಿಕೊಳ್ಳುತ್ತಿದ್ದರಂತೆ!

ಧೋನಿ
ಮುಂಬೈ , ಗುರುವಾರ, 7 ಮೇ 2020 (09:38 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಆರಂಭದಲ್ಲಿ ಕ್ರಿಕೆಟಿಗ ಧೋನಿ ತುಂಬಾ ಸಂಕೋಚದ ಸ್ವಭಾವದವರಾಗಿದ್ದರು ಎಂದು ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ.


ವಿದೇಶ ಪ್ರವಾಸಗಳಿಗೆ ಹೋದರೆ ‍ಧೋನಿ ತಮ್ಮ ಕೋಣೆ ಬಿಟ್ಟು ಎಲ್ಲಿಗೂ ಬರುತ್ತಿರಲಿಲ್ಲ. ನಮ್ಮ ಜತೆಗೆ ಸೇರುತ್ತಿರಲಿಲ್ಲ. ನಾನು, ತೆಂಡುಲ್ಕರ್, ಸೆಹ್ವಾಗ್, ಆಶಿಶ್ ನೆಹ್ರಾ, ಯುವರಾಜ್ ಸಿಂಗ್ ಜತೆಯಾಗಿ ಸುತ್ತಾಡಲು ಹೋಗುತ್ತಿದ್ದೆವು. ಆಗೆಲ್ಲಾ ಧೋನಿ ನಮ್ಮ ಜತೆಗೆ ಬರುತ್ತಿರಲಿಲ್ಲ.

ಆದರೆ 2008 ರ ಸಿಡ್ನಿ ಟೆಸ್ಟ್ ವಿವಾದದ ಬಳಿಕ ಅವರು ಸ್ವಲ್ಪ ನಮ್ಮ ಜತೆ ಬೆರೆಯಲು ಆರಂಭಿಸಿದರು. ಆ ಒಂದು ವಿವಾದಾತ್ಮಕ ಟೆಸ್ಟ್ ಟೀಂ ಇಂಡಿಯಾದ ಎಲ್ಲಾ ಆಟಗಾರರನ್ನು ಒಗ್ಗೂಡಿಸಿತು. ಅದಾದ ಬಳಿಕ ಧೋನಿ ನಮ್ಮ ಜತೆ ಕುಳಿತು ಮಾತನಾಡಲು ಶುರು ಮಾಡಿದರು ಎಂದು ಹರ್ಭಜನ್ ನೆನೆಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ವಿಕೆಟ್ ಬಿದ್ದರೆ ನಮಸ್ತೆ ಮಾಡಿ ಸಂಭ್ರಮಿಸುವುದಾಗಿ ಹೇಳಿದ ಟೀಂ ಇಂಡಿಯಾ ಕ್ರಿಕೆಟಿಗ