Publish Date: Wed, 06 Nov 2019 (08:52 IST)
Updated Date: Wed, 06 Nov 2019 (08:55 IST)
ಕೋಲ್ಕೊತ್ತಾ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ನಿವೃತ್ತಿ ಬಗ್ಗೆ ಹಲವು ಮಾತುಗಳು ಕೇಳಿಬರುತ್ತಲೇ ಇವೆ. ಆದರೆ ಧೋನಿ ನಿವೃತ್ತರಾಗುವ ಮೊದಲೇ ಕಾಮೆಂಟರಿ ಬಾಕ್ಸ್ ನಲ್ಲಿ ಕೂರಲಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಧೋನಿ ಈಗಾಗಲೇ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ನವಂಬರ್ 22 ರಿಂದ ಕೋಲ್ಕೊತ್ತಾದಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ.
ಈ ಪಂದ್ಯದ ವೇಳೆ ಎಲ್ಲಾ ಭಾರತೀಯ ಮಾಜಿ ನಾಯಕರನ್ನು ಬಿಸಿಸಿಐ ಆಹ್ವಾನಿಸುತ್ತಿದೆ. ಈ ವೇಳೆ ಧೋನಿ ಕೂಡಾ ಮೈದಾನಕ್ಕೆ ಆಗಮಿಸಲಿದ್ದು, ಕೆಲ ಹೊತ್ತು ಕಾಮೆಂಟರಿ ಮಾಡಲಿದ್ದಾರೆ. ಆ ಮೂಲಕ ನಿವೃತ್ತಿಗೂ ಮೊದಲೇ ಕಾಮೆಂಟರಿ ಮಾಡಲಿದ್ದಾರೆ.