ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ಎಲ್ಲಾ ನಾಯಕರಿಗೂ ಆಹ್ವಾನ?

ಬುಧವಾರ, 6 ನವೆಂಬರ್ 2019 (08:50 IST)
ಕೋಲ್ಕೊತ್ತಾ: ನವಂಬರ್ 22 ರಂದು ಕೋಲ್ಕೊತ್ತಾದಲ್ಲಿ ನಡೆಯಲಿರುವ ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ಉಭಯ ತಂಡಗಳಿಗೆ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಲಿದೆ.


ಈ ಪಂದ್ಯ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಕನಸಿನ ಕೂಸು. ಹೀಗಾಗಿ ಈ ಐತಿಹಾಸಿಕ ಕ್ಷಣವನ್ನು ಮತ್ತಷ್ಟು ವಿಶೇಷಗೊಳಿಸಲು ಗಂಗೂಲಿ ಚಿಂತನೆ ನಡೆಸಿದ್ದಾರೆ.

ಈ ಪಂದ್ಯಕ್ಕೆ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಇದುವರೆಗೆ ಸಾರಥ್ಯ ವಹಿಸಿದ್ದ ಎಲ್ಲಾ ನಾಯಕರನ್ನೂ ಆಹ್ವಾನಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಇದಕ್ಕಾಗಿ ಬಿಸಿಸಿಐ ಜತೆ ಅಧಿಕೃತ ಪ್ರಸಾರ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಕೂಡಾ ಕೈ ಜೋಡಿಸಿದೆ. ಮೊದಲ ಮತ್ತು ದ್ವಿತೀಯ ದಿನ ಟೀಂ ಇಂಡಿಯಾ ಟೆಸ್ಟ್ ತಂಡದ ಸಾರಥ್ಯ ವಹಿಸಿದ ಎಲ್ಲಾ ನಾಯಕರನ್ನೂ ಆಹ್ವಾನಿಸಲು ಯೋಜನೆ ರೂಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟೀಂ ಇಂಡಿಯಾ ಆಯ್ಕೆ ಸಮಿತಿಯೇ ಸರಿಯಿಲ್ಲ ಎಂದ ಯುವರಾಜ್ ಸಿಂಗ್