ವಾಲಿಬಾಲ್ ಆಯ್ತು, ಈಗ ಯೋಧರಿಗಾಗಿ ಧೋನಿ ಹಾಡು

ಬುಧವಾರ, 7 ಆಗಸ್ಟ್ 2019 (09:36 IST)
ನವದೆಹಲಿ: ಭಾರತೀಯ ಸೇನೆಯಲ್ಲಿ ಕೆಲವು ದಿನಗಳ ಕಾಲ ಕರ್ತವ್ಯ  ನಿರ್ವಹಿಸುತ್ತಿರುವ ಧೋನಿ ಮೊನ್ನೆಯಷ್ಟೇ ಯೋಧರೊಂದಿಗೆ ವಾಲಿಬಾಲ್ ಆಡಿ ಗಮನ ಸೆಳೆದಿದ್ದರು.


ಧೋನಿ ವಾಲಿಬಾಲ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಧೋನಿ ತಮ್ಮ ಜತೆ ಕರ್ತವ್ಯ ನಿರ್ವಹಿಸುತ್ತಿರುವ ಯೋಧರಿಗಾಗಿ ಬಾಲಿವುಡ್ ಸಿನಿಮಾ ಹಾಡೊಂದನ್ನು ಹಾಡಿದ್ದು, ಈ ವಿಡಿಯೋ ಕೂಡಾ ಜನಪ್ರಿಯವಾಗಿದೆ.

ಹಿಂದಿಯ ಕಬೀ ಕಬೀ ಸಿನಿಮಾದ ಮೈ ಪಲ್ ದೋ ಪಲ್ ಹಾಡನ್ನು ಹಾಡಿದ್ದಾರೆ. ಯೋಧರನ್ನು ಉದ್ದೇಶಿಸಿ ಮಾತನಾಡಿದದ ಧೋನಿ ಕೊನೆಗೆ ಹಾಡು ಹಾಡಿ ರಂಜಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇನ್ಮುಂದೆ ಲಡಾಕ್ ಮೂಲದ ಕ್ರಿಕೆಟಿಗರೂ ಜಮ್ಮು ರಣಜಿ ತಂಡಕ್ಕೆ ಸೇರ್ಪಡೆ