Publish Date: Mon, 23 Sep 2019 (08:55 IST)
Updated Date: Mon, 23 Sep 2019 (08:57 IST)
ಮುಂಬೈ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ಮತ್ತೆ ತಮ್ಮ ಬಿಡುವಿನ ಅವಧಿಯನ್ನು ವಿಸ್ತರಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಏಕದಿನ ವಿಶ್ವಕಪ್ ಮುಕ್ತಾಯವಾದ ಬಳಿಕ ಧೋನಿ ಎರಡು ತಿಂಗಳ ಬಿಡುವು ಪಡೆಯುವುದಾಗಿ ಮೊದಲೇ ಬಿಸಿಸಿಐ ಅನುಮತಿ ಕೇಳಿದ್ದರು ಎನ್ನಲಾಗಿತ್ತು.
ಈ ಅವಧಿಯಲ್ಲಿ ಭಾರತ ಹೊಸ ವಿಕೆಟ್ ಕೀಪರ್ ನ ಹುಡುಕಾಟ ನಡೆಸುತ್ತಿದೆ. ಧೋನಿ ನಿವೃತ್ತಿ ಬಗ್ಗೆ ಹಲವು ವದಂತಿಗಳು ಕೇಳಿಬರುತ್ತಲೇ ಇವೆ. ಇದರ ನಡುವೆ ಈಗ ಅವರು ರಜೆ ಅವಧಿಯನ್ನು ನವಂಬರ್ ವರೆಗೆ ವಿಸ್ತರಿಸಿದ್ದಾರೆ ಎಂಬ ವದಂತಿ ಬಂದಿದೆ.
ಹೀಗಾದಲ್ಲಿ ಧೋನಿ ಮುಂಬರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಅಲಭ್ಯರಾಗುವ ಸಾಧ‍್ಯತೆಯಿದೆ. ಒಂದು ವೇಳೆ ಧೋನಿ ವಿಶ್ವಕಪ್ ಟಿ20 ಆಡುವವರಿದ್ದರೆ ಈ ರೀತಿ ಬಿಡುವು ಪಡೆಯಬಾರದು. ಇಲ್ಲವಾದರೆ ಅವರು ನಿವೃತ್ತಿ ಘೋಷಿಸಲಿ ಎಂದು ಹಲವು ಮಾಜಿ ಕ್ರಿಕೆಟಿಗರು ಒತ್ತಾಯಿಸುತ್ತಿದ್ದಾರೆ.