ಧೋನಿಗೆ ಉರುಳಾದ ಅಮ್ರಪಾಲಿ ಕೇಸ್

ಮಂಗಳವಾರ, 3 ಡಿಸೆಂಬರ್ 2019 (09:23 IST)
ರಾಂಚಿ: ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಅಮ್ರಪಾಲಿ ಗ್ರೂಪ್ ರಾಯಭಾರಿಯಾಗಿದ್ದಕ್ಕೆ ಇದೀಗ ಧೋನಿ ತಕ್ಕ  ಬೆಲೆ ತೆರುತ್ತಿದ್ದಾರೆ. ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಅಮ್ರಪಾಲಿ ಕಂಪನಿ ಜತೆಗೆ ಈಗ ಧೋನಿ ಮೇಲೂ ಆಕ್ರೋಶ ವ್ಯಕ್ತವಾಗುತ್ತಿದೆ.


ಫ್ಲ್ಯಾಟ್ ನೀಡುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂತ್ರಸ್ತರು ಈಗ ಧೋನಿ ಮುಖ ನೋಡಿಕೊಂಡು ಹಣ ಹೂಡಿಕೆ ಮಾಡಿದ್ದೆವು. ಈಗ ಧೋನಿಯೂ ಇದಕ್ಕೆ ಉತ್ತರವಾದಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ, ಅಮ್ರಪಾಲಿ ಜನರ ಹಣವನ್ನು ಹಲವು ಕಂಪನಿಗಳಲ್ಲಿ ತೊಡಗಿಸಿಕೊಂಡಿದೆ ಎಂಬ ಆರೋಪವಿದ್ದು, ಇದರಲ್ಲಿ ಧೋನಿ ಪತ್ನಿ ಸಾಕ್ಷಿ ಧೋನಿ ಮಾಲಿಕತ್ವದ ಕಂಪನಿಯೂ ಇದೆ. ಹೀಗಾಗಿ ಖ‍್ಯಾತ ಕ್ರಿಕೆಟಿಗನ ವಿರುದ್ಧವೂ ಸಂತ್ರಸ್ತರು ದೂರುದಾಖಲಿಸಿದ್ದಾರೆ. ಈ ಪ್ರಕರಣ ಧೋನಿಗೆ ಕಗ್ಗಂಟಾಗುವ ಸಂಭವವಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಸ್ಟ್ರೇಲಿಯಾವನ್ನು ಸೋಲಿಸುವ ತಾಕತ್ತಿರೋದು ಟೀಂ ಇಂಡಿಯಾಕ್ಕೆ ಮಾತ್ರ ಎಂದ ಮಾಜಿ ಕ್ರಿಕೆಟಿಗ