Publish Date: Fri, 11 Sep 2020 (11:39 IST)
Updated Date: Fri, 11 Sep 2020 (11:42 IST)
ನವದೆಹಲಿ: ಕ್ರಿಕೆಟಿಗ ಧೋನಿ ಸೇನೆಯ ಗೌರವಯುತ ಹುದ್ದೆಯಲ್ಲಿರುವವರು. ಅವರು ಕಳೆದ ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಧೋನಿ ಈಗ ಭಾರತೀಯ ವಾಯುಸೇನೆಗೆ ಹೊಸದಾಗಿ ಸೇರ್ಪಡೆಯಾಗಿರುವ ರಾಫೆಲ್ ಯುದ್ಧವಿಮಾನಗಳ ಬಗ್ಗೆ ಮಾತನಾಡಿದ್ದಾರೆ.
‘ರಾಫೆಲ್ ಯುದ್ಧವಿಮಾನ ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ. ಇದು ನಮ್ಮ ವಾಯುಸೇನೆಯ ಬಲ ಹೆಚ್ಚಿಸಲಿದೆ ಎಂದು ನಂಬಿದ್ದೇನೆ. ಈ ನಾಲ್ಕನೇ ತಲೆಮಾರಿನ ಫೈಟರ್ ಜೆಟ್ ಗಳಿಂದ ನಮಗೆ ಬಹಳಷ್ಟು ಉಪಯೋಗವಾಗಲಿದೆ. ಈ ಲೋಹದ ಹಕ್ಕಿಗಳಿಗೆ ಶುಭ ಹಾರೈಸುತ್ತಿದ್ದೇನೆ. ಹಾಗಿದ್ದರೂ ಮಿರಾಜ್ 2000 ನ ದಾಖಲೆಯನ್ನು ರಾಫೆಲ್ ಹಿಂದಿಕ್ಕಬಹುದು ಎಂಬ ವಿಶ್ವಾಸವಿದೆ. ಹಾಗಿದ್ದರೂ ನನ್ನ ಫೇವರಿಟ್ ಸು30ಎಂಕೆಐ’ ಎಂದು ಧೋನಿ ಸರಣಿ ಟ್ವೀಟ್ ಗಳ ಮೂಲಕ ಅಭಿನಂದಿಸಿದ್ದಾರೆ.