ಕಾಶ್ಮೀರದಲ್ಲಿ ಧೋನಿಗೆ ‘ಬೂಮ್ ಬೂಮ್ ಅಫ್ರಿದಿ’ ಘೋಷಣೆಯ ಸ್ವಾಗತ

ಶುಕ್ರವಾರ, 9 ಆಗಸ್ಟ್ 2019 (09:52 IST)
ಜಮ್ಮು ಕಾಶ್ಮೀರ: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಕಾಶ್ಮೀರಕ್ಕೆ ತೆರಳಿರುವ ಕ್ರಿಕೆಟಿಗ ಧೋನಿಗೆ ಕೆಲವರು ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೆಸರು ಕೂಗಿ ಅವಮಾನ ಮಾಡಿದ ಘಟನೆ ನಡೆದಿದೆ.


ತನ್ನ ಕರ್ತವ್ಯ ನಿರ್ವಹಿಸಲು ಕಾಶ್ಮೀರದ ಬಾರಾಮುಲ್ಲ ಪ್ರದೇಶಕ್ಕೆ ಬಂದಿದ್ದಾಗ ಧೋನಿಗೆ ಕೆಲವು ಕಿಡಿಗೇಡಿಗಳ ಗುಂಪು ಬೂಮ್ ಬೂಮ್ ಅಫ್ರಿದಿ ಎಂದು ಘೋಷಣೆ ಕೂಗಿ ಸ್ವಾಗತಿಸಿದೆ.

ಆರ್ಟಿಕಲ್ 370 ರದ್ದತಿ ನಂತರ ಇತ್ತೀಚೆಗೆ ಅಫ್ರಿದಿ ಟ್ವಿಟರ್ ನಲ್ಲಿ ಈ ವಿಚಾರವಾಗಿ ಭಾರತವನ್ನು ಟೀಕಿಸಿದ್ದರು. ಇದರ ಬೆನ್ನಲ್ಲೇ ಕಿಡಿಗೇಡಿಗಳು ಧೋನಿ ಮೇಲೆ ಈ ರೀತಿ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕೈ ಕೊಟ್ಟ ಟೀಂ ಇಂಡಿಯಾ ಕೋಚ್ ಹುದ್ದೆ ಆಕಾಂಕ್ಷಿ ಮೈಕ್ ಹಸನ್