Select Your Language

Notifications

webdunia
webdunia
webdunia
webdunia

ಎದುರಾಳಿ ಕಡೆಯಿಂದ ಟೀಂ ಇಂಡಿಯಾಗೆ ಬಂತು ಭರ್ಜರಿ ಸುದ್ದಿ!

ಎದುರಾಳಿ ಕಡೆಯಿಂದ ಟೀಂ ಇಂಡಿಯಾಗೆ ಬಂತು ಭರ್ಜರಿ ಸುದ್ದಿ!
ಕೇಪ್ ಟೌನ್ , ಭಾನುವಾರ, 7 ಜನವರಿ 2018 (08:37 IST)
ಕೇಪ್ ಟೌನ್: ಭಾರತದ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ದ.ಆಫ್ರಿಕಾ ತಂಡಕ್ಕೆ ಶಾಕಿಂಗ್ ಸುದ್ದಿಯೊಂದು ಬಂದಿದೆ. ಆದರೆ ಭಾರತದ ಪಾಲಿಗೆ ಇದು ಸಿಹಿ ಸುದ್ದಿಯಾಗಲಿದೆ.
 

ವಿಶ್ವ ವಿಖ್ಯಾತ ಬೌಲರ್ ಡೇಲ್ ಸ್ಟೇನ್  ಗಾಯದಿಂದ ಚೇತರಿಸಿಕೊಂಡು ಬಹಳ ದಿನಗಳ ನಂತರ ಟೀಂ ಇಂಡಿಯಾ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿದಿದ್ದರು. ಆದರೆ ಇದೀಗ ಅವರು ಮತ್ತೆ ಗಾಯಗೊಂಡಿದ್ದು, ಸರಣಿಯಿಂದ ಹೊರಗುಳಿಯಲಿದ್ದಾರೆ.

ನಿನ್ನೆ ಬೌಲಿಂಗ್ ಮಾಡುತ್ತಿರುವಾಗ ಮತ್ತೆ ಕಾಲಿನ ನೋವು ಕಾಣಿಸಿಕೊಂಡಿದ್ದು, ಅರ್ಧದಿಂದಲೇ ಹೊರ ನಡೆದಿದ್ದರು.  ಗಾಯ ಗಂಭೀರವಾದ ಹಿನ್ನಲೆಯಲ್ಲಿ ಸರಣಿಯ ಮುಂದಿನ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ ಎಂದು ದ.ಆಫ್ರಿಕಾ ತಂಡದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ತಂಡದ ಮಾಜಿ ಕ್ರಿಕೆಟ್ ಆಟಗಾರರಾದ ಸನತ್ ಜಯಸೂರ್ಯ ಸ್ಥಿತಿ ಹೇಗಿದೆ ನೋಡಿ...?