Select Your Language

Notifications

webdunia
webdunia
webdunia
webdunia

ದ.ಆಫ್ರಿಕಾ ತಂಡದಲ್ಲೊಬ್ಬ ಭಾರತೀಯ!

ಭಾರತ-ದ.ಆಫ್ರಿಕಾ ಟೆಸ್ಟ್ ಸರಣಿ
ಕೇಪ್ ಟೌನ್: ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಪಂದ್ಯವಾಡುತ್ತಿರುವ ದ.ಆಫ್ರಿಕಾ ತಂಡದಲ್ಲಿ ಭಾರತೀಯ ಆಟಗಾರನಿದ್ದಾನೆ! ಆಫ್ರಿಕನ್ನರಿಗೆ ಈ ಟೆಸ್ಟ್ ನಲ್ಲಿ ಸ್ಪಿನ್ನರ್ ಆಗಿ ಕಣಕ್ಕಿಳಿದಿರುವುದು ಭಾರತೀಯ ಮೂಲದ ಕೇಶವ್ ಮಹಾರಾಜ್.
 

ಈತ ಹುಟ್ಟಿ ಬೆಳೆದಿದ್ದು ದ.ಆಪ್ರಿಕಾದ ಡರ್ಬನ್ ನಲ್ಲಿಯೇ ಆದರೂ ಈತನ ತಾತ ಭಾರತೀಯ ಮೂಲದವರು. ಅಷ್ಟೇ ಅಲ್ಲದೆ, ಈತ ಚಿಕ್ಕಂದಿನಲ್ಲಿಯೇ ಭಾರತದ ಮಾಜಿ ಕ್ರಿಕೆಟಿಗ ಕಿರಣ್ ಮೋರೆಯಿಂದ ಆಶೀರ್ವಾದ ಪಡೆದಿದ್ದನಲ್ಲದೆ, ಈತ ಕ್ರಿಕೆಟಿಗನಾಗುತ್ತಾನೆ ಎಂದು ಮೋರೆ ಅಂದೇ ಭವಿಷ್ಯ ನುಡಿದಿದ್ದರಂತೆ!

ಅದೇನೇ ಇರಲಿ, ಜಿಂಬಾಬ್ವೆ ವಿರುದ್ಧ ಒಂದೇ ವಿಕೆಟ್ ನಲ್ಲಿ ಐದು ವಿಕೆಟ್ ಗಳ ಗೊಂಚಲು ಪಡೆದಿದ್ದ ಕೇಶವ್ ಭಾರತದ ವಿರುದ್ಧ ಈಗಾಗಲೇ ಬ್ಯಾಟಿಂಗ್ ನಲ್ಲಿ ತನ್ನ ಸಾಮರ್ಥ್ಯ ತೋರಿಸಿದ್ದಾರೆ. ಮೊದಲ ಟೆಸ್ಟ್ ನ ಮೊದಲ ದಿನ ಕುಸಿಯುತ್ತಿದ್ದ ದ.ಆಫ್ರಿಕಾಗೆ 35 ರನ್ ಗಳ ಉಪಯುಕ್ತ ಕಾಣಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಟೆಸ್ಟ್ ನಲ್ಲಿ ಕಳಪೆ ಪ್ರದರ್ಶನ ಕೊಟ್ಟರೆ ನಾಯಕ ಕೊಹ್ಲಿ ಎದುರಿಸಬಹುದಾದ ಮೂರು ಟೀಕೆಗಳು!