Publish Date: Fri, 05 Jan 2018 (05:47 IST)
Updated Date: Fri, 05 Jan 2018 (05:48 IST)
ಕೇಪ್ ಟೌನ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡಲು ಪ್ರವಾಸ ಕೈಗೊಂಡಿರುವ ಭಾರತೀಯ ಆಟಗಾರರಿಗೆ ಸ್ನಾನ ಮಾಡಲೂ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ!
ಎಷ್ಟೇ ಸುಸ್ತಾಗಿದ್ದರೂ, ಬೆವರಿನಿಂದ ಮೈ ವಾಸನೆ ಬರುತ್ತಿದ್ದರೂ ಕೇವಲ 2 ನಿಮಿಷದಲ್ಲಿ ಸ್ನಾನ ಮುಗಿಸಿಕೊಂಡು ಹೊರಬರಬೇಕಿದೆ! ಇದೇನು ರೂಲ್ಸ್ ಅಂತೀರಾ?
ಇದು ಕೇಪ್ ಟೌನ್ ಜನರಿಗೆ ಅಲ್ಲಿನ ಸ್ಥಳೀಯಾಡಳಿತ ಮಾಡಿರುವ ಹುಕುಂ. ಇದು ಟೀಂ ಇಂಡಿಯಾಗೂ ಅನ್ವಯವಾಗಲಿದೆ. ಕಾರಣ ಇಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದೆ. ಹೀಗಾಗಿ ಗಂಟೆಗಟ್ಟಲೆ ಬಾತ್ ರೂಂನಲ್ಲಿ ಕೂತು ನೀರು ವೇಸ್ಟ್ ಮಾಡುವ ಹಾಗಿಲ್ಲ ಎಂದು ಸ್ಥಳೀಯಾಡಳಿತ ಆದೇಶ ಜಾರಿ ಮಾಡಿದೆ. ಇದರಿಂದಾಗಿ ಅಪರೂಪಕ್ಕೆ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗರು ನೀರಿಗೂ ಪರದಾಡುವಂತಾಗಿದೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ