Select Your Language

Notifications

webdunia
webdunia
webdunia
webdunia

ಜಡೇಜಾಗೆ ಜ್ವರ! ಟೀಂ ಇಂಡಿಯಾದಲ್ಲಿ ಆತಂಕ!

ಜಡೇಜಾಗೆ ಜ್ವರ! ಟೀಂ ಇಂಡಿಯಾದಲ್ಲಿ ಆತಂಕ!
ಕೇಪ್ ಟೌನ್ , ಗುರುವಾರ, 4 ಜನವರಿ 2018 (09:18 IST)
ಕೇಪ್ ಟೌನ್: ದ.ಆಫ್ರಿಕಾಗೆ ಟೆಸ್ಟ್ ಸರಣಿ ಆಡಲು ಬಂದಿಳಿದಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮೊದಲು ಶಿಖರ್ ಧವನ್ ಗಾಯದ ಚಿಂತೆಯಾಗಿದ್ದರೆ, ಅದು ನಿವಾರಣೆಯಾಗುತ್ತಿದ್ದಂತೆ ರವೀಂದ್ರ ಜಡೇಜಾ ಮೂಲಕ ಆತಂಕ ಎದುರಾಗಿದೆ.
 

ಭಾರತದ ಪ್ರಮುಖ ಸ್ಪಿನ್ ಅಸ್ತ್ರ ರವೀಂದ್ರ ಜಡೇಜಾ ಬ್ಯಾಟ್ ಮೂಲಕವೂ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಬಲ್ಲರು. ಆದರೆ ಅವರೀಗ ಜ್ವರದಿಂದ ಬಳಲುತ್ತಿದ್ದು, ಮೊದಲ ಟೆಸ್ಟ್ ಆಡುವುದು ಅನುಮಾನವಾಗಿದೆ.

ನಾಳೆಯಿಂದ ದ.ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದ್ದು, ಈ ವೇಳೆಗೆ ಜಡೆಜಾ ಚೇತರಿಸಿಕೊಳ್ಳುವುದು ಅನುಮಾನವಾಗಿದೆ. ಪ್ರಮುಖ ಆಟಗಾರನ ಅನುಪಸ್ಥಿತಿ ಟೀಂ ಇಂಡಿಯಾಗೆ ಹೊಡೆತ ನೀಡಲಿದೆ. ಈ ವೇಳೆ ಶಿಖರ್ ಧವನ್ ಚೇತರಿಸಿಕೊಂಡಿದ್ದು ಮೊದಲ ಟೆಸ್ಟ್ ಗೆ ಲಭ್ಯರಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ಕೊಟ್ಟ ಉಂಗುರವನ್ನು ವಿರಾಟ್ ಕೊಹ್ಲಿ ಎಲ್ಲಿ ನೇತು ಹಾಕಿದ್ದಾರೆ ಗೊತ್ತೇ?!