Select Your Language

Notifications

webdunia
webdunia
webdunia
webdunia

ಶೂನ್ಯ ಸಂಪಾದನೆಯಲ್ಲೂ ದಾಖಲೆ ಮಾಡಿದ ನಾಯಕ ಕೊಹ್ಲಿ

ಶೂನ್ಯ ಸಂಪಾದನೆಯಲ್ಲೂ ದಾಖಲೆ ಮಾಡಿದ ನಾಯಕ ಕೊಹ್ಲಿ
ಕೋಲ್ಕೊತ್ತಾ , ಶುಕ್ರವಾರ, 17 ನವೆಂಬರ್ 2017 (08:57 IST)
ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ದಿನ ಕೆಎಲ್ ರಾಹುಲ್ ಜತೆಗೆ ನಾಯಕ ಕೊಹ್ಲಿ ಕೂಡಾ ಶೂನ್ಯ ಸಂಪಾದನೆ ಮಾಡಿದ್ದಾರೆ. ಆದರೆ ಶೂನ್ಯದಲ್ಲೂ ದಾಖಲೆ ಮಾಡಿದ್ದಾರೆ.

 
ಕೆಎಲ್ ರಾಹುಲ್ ಪ್ರಥಮ ಎಸೆತಕ್ಕೇ ಶೂನ್ಯಕ್ಕೆ ಔಟಾಗುವ ಮೂಲಕ ಈ ಅಪಕೀರ್ತಿಗೆ ಒಳಗಾದ ಆರನೇ ಭಾರತೀಯ ಆಟಗಾರ ಎಂಬ ಕುಖ್ಯಾತಿಗೆ ಒಳಗಾದರು. ಇದೀಗ ಕೊಹ್ಲಿ ಕೂಡಾ ಅಂತಹದ್ದೇ ಅಪಕೀರ್ತಿಗೆ ಒಳಗಾಗಿದ್ದಾರೆ.

ಶೂನ್ಯಕ್ಕೆ ಅತೀ ಹೆಚ್ಚು ಬಾರಿ ಔಟಾದ ನಾಯಕರ ಪೈಕಿ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಕಪಿಲ್ ದೇವ್ 5 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಇದೀಗ ಕೊಹ್ಲಿ ಕೂಡಾ ಇಷ್ಟೇ ಬಾರಿ ಶೂನ್ಯಕ್ಕೆ ಔಟಾಗಿ ಕಪಿಲ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಶೂನ್ಯ ವೀರರ’ ಸಾಲಿಗೆ ಸೇರಿದ ಕೆಎಲ್ ರಾಹುಲ್ ಗೆ ಸುನಿಲ್ ಗವಾಸ್ಕರ್ ಸ್ವಾಗತ