Publish Date: Wed, 26 Jun 2019 (10:37 IST)
Updated Date: Wed, 26 Jun 2019 (10:40 IST)
ಮುಂಬೈ: ವೆಸ್ಟ್ ಇಂಡೀಸ್ ನ ಕ್ರಿಕೆಟ್ ದೈತ್ಯ ಬ್ರಿಯಾನ್ ಲಾರಾ ಹೃದಯ ತೊಂದರೆಗೊಳಗಾಗಿ ನಿನ್ನೆ ಮುಂಬೈನ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರ ಸದ್ಯ ಆರಾಮವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ವಿಶ್ವಕಪ್ ಕಾಮೆಂಟರಿ ಮಾಡಲು ಕೆಲವು ದಿನಗಳಿಂದ ಲಾರಾ ಮುಂಬೈನಲ್ಲೇ ವಾಸ್ತವ್ಯವಿದ್ದಾರೆ.
ಮಂಗಳವಾರ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿದ್ದರಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸಮಸ್ಯೆ ಗಂಭೀರವಲ್ಲ. ಸದ್ಯ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.