Select Your Language

Notifications

webdunia
webdunia
webdunia
webdunia

ಮೊನ್ನೆ ಪ್ಲಾಪ್ ಶೋ ನೀಡಿದ್ದ ಪಾಕ್ ಕ್ರಿಕೆಟಿಗರು ಸೂಪರ್ ಮ್ಯಾನ್ ಗಳಾಗಿದ್ದು ಹೇಗೆ?!

ಮೊನ್ನೆ ಪ್ಲಾಪ್ ಶೋ ನೀಡಿದ್ದ ಪಾಕ್ ಕ್ರಿಕೆಟಿಗರು ಸೂಪರ್ ಮ್ಯಾನ್ ಗಳಾಗಿದ್ದು ಹೇಗೆ?!
ಲಂಡನ್ , ಮಂಗಳವಾರ, 4 ಜೂನ್ 2019 (09:51 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಮೊದಲ ಪಂದ್ಯದಲ್ಲಿ ದುರ್ಬಲ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 105 ರನ್ ಗಳಿಗೆ ಆಲೌಟ್ ಆಗಿ ವಾಚಮಗೋಚರವಾಗಿ ಬೈಸಿಕೊಂಡಿದ್ದ ಪಾಕ್ ಕ್ರಿಕೆಟಿಗರು ಫೀನಿಕ್ಸ್ ನಂತೆ ಮೇಲೆದ್ದು, ಎರಡನೇ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನೇ ಮಣಿಸಿದೆ.


ಈ ಬಾರಿಯೂ ಪಾಕ್ ಮೊದಲು ಬ್ಯಾಟಿಂಗ್ ನಡೆಸಿತ್ತು. ಆದರೆ ಕಳೆದ ಬಾರಿಯಂತೆ ಈ ಬಾರಿ ಪಾಕ್ ಬ್ಯಾಟ್ಸ್ ಮನ್ ಗಳು ಎಡವಲಿಲ್ಲ. ಸಂಘಟಿತ ಹೋರಾಟ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಅತ್ಯುತ್ತಮ ರನ್ ಕಲೆ ಹಾಕಿದ್ದರಿಂದ ಪಾಕ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 348 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕೂಟದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿರುವ ಅತಿಥೇಯ ತಂಡ 14 ರನ್ ಗಳ ಸೋಲನುಭವಿಸಿತು. ಇಂಗ್ಲೆಂಡ್ ಪರ ಜೋ ರೂಟ್ (107) ಮತ್ತು ಜೋಸ್ ಬಟ್ಲರ್ (103) ಶತಕ ಗಳಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.  ಇದರೊಂದಿಗೆ ಮೊದಲ ಪಂದ್ಯ ಹೀನಾಯವಾಗಿ ಸೋತಿದ್ದಕ್ಕೆ ಭಾರೀ ಟ್ರೋಲ್ ಗೊಳಗಾಗಿದ್ದ ಪಾಕ್ ಎರಡನೇ ಪಂದ್ಯದಲ್ಲಿ ಅದ್ಭುತ ಕಮ್ ಬ್ಯಾಕ್ ಮಾಡುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆಯ ಕರೆಗಂಟೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಜೆರ್ಸಿ ಕಲರ್ ಬದಲಾವಣೆ