Publish Date: Tue, 04 Jun 2019 (09:34 IST)
Updated Date: Tue, 04 Jun 2019 (09:36 IST)
ಲಂಡನ್: ಕಳೆದ ಕೆಲವು ದಿನಗಳಿಂದ ಫಾರ್ಮ್ ನಲ್ಲಿಲ್ಲದೇ ಸಾಕಷ್ಟು ಟೀಕೆಗೊಳಗಾಗಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಇದೀಗ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ರಾಹುಲ್ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸುವುದರೊಂದಿಗೆ ಟೂರ್ನಮೆಂಟ್ ಗೆ ತಾವು ಸಿದ್ಧರಾಗಿರುವುದಾಗಿ ಸಂದೇಶ ರವಾನಿಸಿದ್ದರು. ಬಾಂಗ್ಲಾ ವಿರುದ್ಧ ರಾಹುಲ್ ಇನಿಂಗ್ಸ್ ನೋಡಿ ನಾಯಕ ಕೊಹ್ಲಿ ಭಾರೀ ಹೊಗಳಿಕೆ ನೀಡಿದ್ದಲ್ಲದೆ, ಅಂತೂ ನಾಲ್ಕನೇ ಕ್ರಮಾಂಕದಲ್ಲಿ ಅವರು ರನ್ ಗಳಿಸಿದ್ದು ನಮಗೆ ದೊಡ್ಡ ಪ್ಲಸ್ ಪಾಯಿಂಟ್ ಎಂದಿದ್ದರು.
ನಾಯಕನ ಸ್ಪೂರ್ತಿಯುತ ಮಾತಿನಿಂದ ಉತ್ತೇಜಿತಗೊಂಡಿರುವ ರಾಹುಲ್ ಇದೀಗ ನೆಟ್ಸ್ ನಲ್ಲಿ ಬೆವರಿಳಿಸುತ್ತಿದ್ದು, ವೇಗದ ಬಾಲ್ ಗಳನ್ನು ಎದುರಿಸಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಹೀಗಾಗಿ ಅವರು ದ.ಆಫ್ರಿಕಾ ವಿರುದ್ಧ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತವೆಂದೇ ಹೇಳಲಾಗಿದೆ.