ಕೊಹ್ಲಿಯೇ ಬೆಸ್ಟ್ ಎನ್ನುವವರು ಪಾಕಿಸ್ತಾನದ ಬಾಬರ್ ಅಜಮ್ ಬ್ಯಾಟಿಂಗ್ ನೋಡಲಿ!

ಬುಧವಾರ, 6 ಮೇ 2020 (10:06 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಹೊಗಳುವವರು ಒಮ್ಮೆ ಪಾಕಿಸ್ತಾನದ ಆರಂಭಿಕ ಬಾಬರ್ ಅಜಮ್ ಬ್ಯಾಟಿಂಗ್ ನೋಡಲಿ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಹೇಳಿದ್ದಾರೆ.


ಕಳೆದ ಕೆಲವು ವರ್ಷಗಳಿಂದ ಬಾಬರ್‍ ಬ್ಯಾಟಿಂಗ್ ಸಾಕಷ್ಟು ಸುಧಾರಿಸಿದೆ. ಅವರು ಪರಿಪಕ್ವವಾಗಿ ಬೆಳೆಯುತ್ತಿದ್ದಾರೆ. ಕೊಹ್ಲಿ ಉತ್ತಮ ಬ್ಯಾಟ್ಸ್ ಮನ್ ಆದರೆ ಬಾಬರ್ ಬ್ಯಾಟಿಂಗ್ ಕೂಡಾ ಕಣ್ಣಿಗೆ ಹಬ್ಬವೇ ಎಂದು ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.

ಟಿ20 ಕ್ರಿಕೆಟ್ ನಲ್ಲಿ ನಂ.1 ಶ್ರೇಯಾಂಕದಲ್ಲಿರುವ ಬಾಬರ್ ಅಜಮ್ ರನ್ನು ಆಗಾಗ ಕೊಹ್ಲಿಗೆ ಹೋಲಿಕೆ ಮಾಡಲಾಗುತ್ತದೆ. ಇನ್ನೂ ಐದು ವರ್ಷ ಕಳೆದರೆ ಬಾಬರ್ ವಿಶ್ವದ ಟಾಪ್ 5 ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾಗಿರುತ್ತಾರೆ ಎಂದು ಟಾಮ್ ಮೂಡಿ ಭವಿಷ್ಯ ನುಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸುಳ್ಳು ಸುದ್ದಿಗಳ ವಿರುದ್ಧ ವಿರಾಟ್ ಕೊಹ್ಲಿ ಸೇರಿದಂತೆ ಸೆಲೆಬ್ರಿಟಿಗಳ ಕ್ಯಾಂಪೈನ್