Publish Date: Sat, 09 May 2020 (10:51 IST)
Updated Date: Sat, 09 May 2020 (10:53 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್-ನಟಿ ಅಥಿಯಾ ಶೆಟ್ಟಿ ನಡುವಿನ ಸಂಬಂಧ ಅರಳುವ ಮೊದಲೇ ಮುದುಡಿ ಹೋಯಿತೇ? ಹೀಗೊಂದು ರೂಮರ್ ಹಬ್ಬಿಕೊಳ್ಳಲು ಕಾರಣ ಅಥಿಯಾ ಪ್ರಕಟಿಸಿದ ಫೋಟೋ.
ಅಥಿಯಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ರಾಹುಲ್ ಜತೆಗಿದ್ದ ಫೋಟೋವನ್ನು ಕಟ್ ಮಾಡಿ ತಮ್ಮನ್ನು ಮಾತ್ರ ಕಾಣುವಂತೇ ಪ್ರಕಟಿಸಿದ್ದರು. ಇದನ್ನು ನೋಡಿ ನೆಟ್ಟಿಗರು ಯಾಕೆ ರಾಹುಲ್ ಫೋಟೋಗೆ ಕತ್ತರಿ ಹಾಕಿದಿರಿ? ಎಂದು ಕೇಳಿದರೆ ಇನ್ನು ಕೆಲವರು ಬಹುಶಃ ಇಬ್ಬರೂ ಬ್ರೇಕ್ ಅಪ್ ಆಗಿರಬಹುದು ಎಂದೇ ಲೆಕ್ಕಾಚಾರ ಹಾಕಿದ್ದರು.
ಇವರೆಲ್ಲರಿಗೂ ತಕ್ಕ ಉತ್ತರ ನೀಡಿರುವ ಅಥಿಯಾ ನಾನು ಹಾಕಿರುವುದು ಕೆಲವು ದಿನಗಳ ಹಿಂದೆ ನನ್ನನ್ನು ಲೂಡೋ ಗೇಮ್ ನಲ್ಲಿ ಸೋಲಿಸಿದ ವ್ಯಕ್ತಿಯ ಫೋಟೋ ಎಂದು ತಮಾಷೆ ಮಾಡಿದ್ದಾರೆ. ಅಲ್ಲದೆ, ಇಬ್ಬರೂ ಈಗಲೂ ಪರಸ್ಪರ ಇನ್ ಸ್ಟಾ ಪೇಜ್ ಫಾಲೋ ಮಾಡುತ್ತಿದ್ದಾರೆ. ಆ ಮೂಲಕ ಬ್ರೇಕಪ್ ಸುದ್ದಿಗಳೆಲ್ಲಾ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.