Publish Date: Sat, 09 May 2020 (09:20 IST)
Updated Date: Sat, 09 May 2020 (09:21 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಆರ್ಥಿಕವಾಗಿ ಹಿಂದುಳಿದ ಬಡವರು, ದೀನದಲಿತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಹೈ ಫೈ ಯೂಥ್ ಫೌಂಡೇಷನ್ ಗೆ ಸಚಿನ್ ಭಾರೀ ಮೊತ್ತದ ದೇಣಿಗೆ ನೀಡಿದ್ದು, ಇದು ಬಡವರು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಮಕ್ಕಳಿಗೆ ನೆರವಾಗಲಿದೆ.
ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಹೈ ಫೈ ಫೌಂಡೇಷನ್ ಸಚಿನ್ ಗೆ ಧನ್ಯವಾದ ಸಲ್ಲಿಸಿದೆ. ಇದಕ್ಕೂ ಮೊದಲು ಸಚಿನ್ ಪ್ರಧಾನಿ ಪರಿಹಾರ ನಿಧಿಗೆ ಮತ್ತು ಮುಖ್ಯಮಂತ್ರಿಗಳ ನಿಧಿಗೆ ಭಾರೀ ಮೊತ್ತದ ಪರಿಹಾರ ದೇಣಿಗೆ ನೀಡಿ ಸುದ್ದಿಯಾಗಿದ್ದರು.