Select Your Language

Notifications

webdunia
webdunia
webdunia
webdunia

ಆಶಿಷ್ ನೆಹ್ರಾಗೆ ಟೀಂ ಇಂಡಿಯಾದಿಂದ ಸಿಕ್ತು ಭಾವುಕ ವಿದಾಯ

ಆಶಿಷ್ ನೆಹ್ರಾಗೆ ಟೀಂ ಇಂಡಿಯಾದಿಂದ ಸಿಕ್ತು ಭಾವುಕ ವಿದಾಯ
ನವದೆಹಲಿ , ಗುರುವಾರ, 2 ನವೆಂಬರ್ 2017 (09:01 IST)
ನವದೆಹಲಿ: ಕ್ರಿಕೆಟ್ ನಿಂದ ಗೌರವಪೂರ್ವಕವಾಗಿ ನಿವೃತ್ತಿ ಹೊಂದಲೂ ಭಾಗ್ಯ ಬೇಕು. ಎಲ್ಲರಿಗೂ ಆ ರೀತಿಯ ಭಾವುಕ ವಿದಾಯದ ಭಾಗ್ಯ ಇರುವುದಿಲ್ಲ. ಟೀಂ ಇಂಡಿಯಾದಲ್ಲಿ ಇಂತಹ ವಿದಾಯ ಸಿಕ್ಕಿದ ಕೆಲವೇ ಕೆಲವು ಆಟಗಾರರಲ್ಲಿ ಆಶಿಷ್ ನೆಹ್ರಾ ಕೂಡಾ ಆಗಿದ್ದು ವಿಶೇಷ.

 
ತಂಡದಲ್ಲಿ ಇದ್ದುದರಿಂದ ಹೆಚ್ಚು ನೆಹ್ರಾ ಗಾಯಾಳುವಾಗಿಯೋ, ಫಾರ್ಮ್ ಕೊರತೆಯಿಂದಲೋ ಹೊರಗಿದ್ದುದೇ ಹೆಚ್ಚು.  ಕೊನೆಗೂ 20 ವರ್ಷಗಳ ತಮ್ಮ ಸುದೀರ್ಘ ಪಯಣಕ್ಕೆ ನಿನ್ನೆ ಮಂಗಳ ಹಾಡಿದ ನೆಹ್ರಾಗೆ ಟೀಂ ಇಂಡಿಯಾ ಭಾವುಕವಾಗಿ ವಿದಾಯ ಕೋರಿತು.

ಪಂದ್ಯಕ್ಕೂ ಮೊದಲು ಧೋನಿ, ಕೊಹ್ಲಿ ವಿಶೇಷ ಸ್ಮರಣಿಕೆಯಿತ್ತು ನೆಹ್ರಾರನ್ನು ಗೌರವಿಸಿದರು. ಅಂತಿಮ ಓವರ್ ಎಸೆಯುವಾಗ ನೆಹ್ರಾಗೆ ತಮ್ಮ ಹೆಸರಿನ ಎಂಡ್ ನಿಂದ ಬೌಲಿಂಗ್ ಮಾಡುವ ಗೌರವ ಸಿಕ್ಕಿತು. ಪಂದ್ಯ ಮುಗಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಹೆಗಲ ಮೇಲೆ ಕೂತು ಟೀಂ ಇಂಡಿಯಾದ ಇತರ ಆಟಗಾರರ ಜತೆ ಮೈದಾನಕ್ಕೆ ಒಂದು ಸುತ್ತಿ ಅಭಿಮಾನಿಗಳತ್ತ ಕೈ ಬೀಸಿದರು ನೆಹ್ರಾ. ಅನಿಲ್ ಕುಂಬ್ಳೆ, ಸಚಿನ್ ತೆಂಡುಲ್ಕರ್ ಬಳಿಕ ಈ ರೀತಿ ಬೀಳ್ಕೊಡುಗೆ ಪಡೆಯುತ್ತಿರುವುದು ನೆಹ್ರಾ ಎನ್ನುವುದು ವಿಶೇಷವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆಯೊಂದಿಗೆ ನಿವೃತ್ತರಾದ ಆಶಿಷ್ ನೆಹ್ರಾ