Publish Date: Wed, 01 Nov 2017 (10:59 IST)
Updated Date: Wed, 01 Nov 2017 (11:01 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗರು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯವಾಡಲು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ ತವರಿಗೆ ಆಗಮಿಸಿದ ಕ್ರಿಕೆಟಿಗರಿಗೆ ನಾಯಕ ಕೊಹ್ಲಿ ಸರಿಯಾಗಿಯೇ ಉಪಚರಿಸಿದ್ದಾರೆ.
ತಮ್ಮ ಒಡೆತನದ ರೆಸ್ಟೋರೆಂಟ್ ಗೆ ಟೀಂ ಇಂಡಿಯಾ ಆಟಗಾರರನ್ನು ಕರೆಸಿ ಭರ್ಜರಿ ಡಿನ್ನರ್ ಕೊಡಿಸಿದ ವಿರಾಟ್ ಕೊಹ್ಲಿ ಚೆನ್ನಾಗಿಯೇ ಆತಿಥ್ಯ ನೀಡಿದ್ದಾರೆ.
ಎಂಎಸ್ ಧೋನಿ, ಶಿಖರ್ ಧವನ್, ಅಕ್ಸರ್ ಪಟೇಲ್, ಕೆಎಲ್ ರಾಹುಲ್ ಸೇರಿದಂತೆ ಬಹುತೇಕ ಕ್ರಿಕೆಟಿಗರು ಕೊಹ್ಲಿ ರೆಸ್ಟೋರೆಂಟ್ ಗೆ ಲಗ್ಗೆಯಿಟ್ಟು ಚೆನ್ನಾಗಿ ಸವಿದು ಬಂದಿದ್ದಾರೆ. ಬಳಿಕ ಈ ಪಾರ್ಟಿಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ