Publish Date: Sat, 18 Apr 2020 (09:22 IST)
Updated Date: Sat, 18 Apr 2020 (09:23 IST)
ಮುಂಬೈ: ಲಾಕ್ ಡೌನ್ ನಿಂದಾಗಿ ಕ್ರಿಕೆಟ್ ಪಂದ್ಯಗಳು ನಡೆಯುತ್ತಿಲ್ಲ. ಸದಾ ಮೈದಾನದಲ್ಲೇ ಇರುತ್ತಿದ್ದ ಕ್ರಿಕೆಟಿಗರು ಈಗ ಮನೆಯಲ್ಲೇ ಕಾಲ ಕಳೆಯುವಂತಾಗಿದೆ.
ಈ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೇಸರ ಕಳೆಯಲು ಪತ್ನಿ ಅನುಷ್ಕಾ ಶರ್ಮಾ ಮನೆಯಲ್ಲೇ ಮೈದಾನದ ವಾತಾವರಣ ಸೃಷ್ಟಿಸಿದ್ದಾರೆ!
ಅಂದರೆ ಮೈದಾನದಲ್ಲಿ ಕೊಹ್ಲಿಗೆ ಅಭಿಮಾನಿಗಳು ಅವರ ಹೆಸರು ಕರೆದು ಕೂಗಿ ಸಿಕ್ಸರ್ ಹೊಡಿ ಎನ್ನುವಂತೆ ಮಿಮಿಕ್ರಿ ಮಾಡಿ ಪತಿಯ ಬೇಸರ ಕಳೆಯಲು ಪ್ರಯತ್ನಿಸಿದ್ದಾರೆ. ಈ ಫನ್ನಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.