Publish Date: Tue, 17 Nov 2020 (09:47 IST)
Updated Date: Tue, 17 Nov 2020 (09:48 IST)
ಬೆಂಗಳೂರು: ಜಂಬೋ ಅನಿಲ್ ಕುಂಬ್ಳೆ ಕೇವಲ ಕ್ರಿಕೆಟಿನಾಗಿ ಮಾತ್ರವಲ್ಲ, ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲೂ ಸದಾ ಮುಂದು. ಸಮಯ ಸಿಕ್ಕಾಗಲೆಲ್ಲಾ ಕ್ಯಾಮರಾ ಎತ್ತಿಕೊಂಡು ತಮ್ಮ ಮೆಚ್ಚಿನ ಫೋಟೋಗ್ರಫಿಯಲ್ಲಿ ತೊಡಗಿಸಿಕೊಳ್ಳುವ ಅನಿಲ್ ಕುಂಬ್ಳೆ ಈಗ ಮತ್ತೆ ಅದೇ ಕೆಲಸಕ್ಕೆ ಮರಳಿದ್ದಾರೆ.
ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೋಚ್ ಆಗಿ ಕರ್ತವ್ಯ ನಿಭಾಯಿಸಿ ತವರಿಗೆ ಮರಳಿರುವ ಅನಿಲ್ ಕುಂಬ್ಳೆ ಮತ್ತೆ ವೈಲ್ಡ್ ಲೈಫ್ ಫೋಟೋಗ್ರಫಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದ್ದಾರೆ. ಬೌಲಿಂಗ್ ನಲ್ಲಿ ಕುಂಬ್ಳೆ ಎಷ್ಟು ಪರ್ಫೆಕ್ಟ್ ಆಗಿದ್ದರೋ, ಫೋಟೋಗ್ರಫಿಯಲ್ಲೂ ಅದ್ಭುತ ಎನ್ನುವ ಫೋಟೋಗಳನ್ನು ಸೆರೆಹಿಡಿದಿದ್ದಾರೆ.