೨೦೨೨ರ ಐಪಿಎಲ್ ನನ್ನ ಕೊನೆಯ ಐಪಿಎಲ್ ಎಂಬ ಟ್ವೀಟ್ ಡಿಲಿಟ್ ಮಾಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಂಬಟಿ ರಾಯುಡು ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡಳಿತ ಮಂಡಳಿ ಜೊತೆ ಮಾತುಕತೆ ನಂತರ ಅಂಬಟಿ ರಾಯುಡು ತಮ್ಮ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದು, ಟೂರ್ನಿಯಲ್ಲಿ ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮುಂದುವರಿಯುವ ಸುಳಿವು ನೀಡಿದ್ದಾರೆ.
೩೬ ವರ್ಷದ ಅಂಬಟಿ ರಾಯುಡು ಶನಿವಾರ ಟ್ವೀಟ್ ಮಾಡಿ ಇದೇ ನನ್ನ ಕೊನೆಯ ಐಪಿಎಲ್ ಟೂರ್ನಿ. ಅದ್ಭುತವಾದ ಈ ಪ್ರಯಾಣವನ್ನು ಕೊನೆ ಆಗುತ್ತಿದೆ ಎಂದು ಹೇಳುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡಳಿತ ಮಂಡಳಿ ಮಾತುಕತೆ ನಂತರ ಅವರು ಟ್ವೀಟ್ ಡಿಲಿಟ್ ಮಾಡಿದ್ದು, ಮುಂದಿನ ಆವೃತ್ತಿಯಲ್ಲೂ ಆಡುವ ಮುನ್ಸೂಚನೆ ನೀಡಿದ್ದಾರೆ.