Publish Date: Mon, 18 Jul 2022 (08:35 IST)
Updated Date: Mon, 18 Jul 2022 (09:22 IST)
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಶತಕಕ್ಕೆ ಯುವರಾಜ್ ಜೊತೆಗೆ ನಡೆಸಿದ 45 ನಿಮಿಷಗಳ ಸಂಭಾಷಣೆ ಕಾರಣವಾಯ್ತಾ?
ಪಂದ್ಯದ ನಂತರ ಯುವಿ ಮಾಡಿರುವ ಟ್ವೀಟ್ ಈಗ ಕುತೂಹಲಕ್ಕೆ ಕಾರಣವಾಗಿದೆ. ಯುವರಾಜ್ ಸಿಂಗ್ ಭಾರತದ ಗೆಲುವನ್ನು ಸಂಭ್ರಮಿಸಿ ಟ್ವೀಟ್ ಮಾಡುವಾಗ ರಿಷಬ್ ಶತಕಕ್ಕೆ ಅಭಿನಂದನೆ ಸಲ್ಲಿಸುತ್ತಾ 45 ನಿಮಿಷಗಳ ಸಂಭಾಷಣೆ ಫಲಪದ್ರವಾಗಿದೆ ಎಂದು ಹೇಳಿದ್ದಾರೆ.
ಹೀಗಾಗಿ ಈ ಪಂದ್ಯಕ್ಕೆ ಮೊದಲು ಯುವರಾಜ್ ಸಿಂಗ್ ರಿಷಬ್ ಜೊತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಇದಕ್ಕೆ ಟ್ವಿಟರಿಗರು ಖುಷಿ ವ್ಯಕ್ತಪಡಿಸಿದ್ದಾರೆ.