Select Your Language

Notifications

webdunia
webdunia
webdunia
webdunia

ಬಾಬರ್ ಅಜಮ್ ಟ್ವೀಟ್ ಕೊಹ್ಲಿ ಪ್ರತಿಕ್ರಿಯಿಸಬೇಕಿತ್ತು ಎಂದ ಶಾಹಿದ್ ಅಫ್ರಿದಿ

ಬಾಬರ್ ಅಜಮ್ ಟ್ವೀಟ್ ಕೊಹ್ಲಿ ಪ್ರತಿಕ್ರಿಯಿಸಬೇಕಿತ್ತು ಎಂದ ಶಾಹಿದ್ ಅಫ್ರಿದಿ
ನವದೆಹಲಿ , ಶನಿವಾರ, 16 ಜುಲೈ 2022 (09:40 IST)
ನವದೆಹಲಿ: ಫಾರ್ಮ್ ಕಳೆದುಕೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಪರವಾಗಿ ಪಾಕ್ ನಾಯಕ ಬಾಬರ್ ಅಜಮ್ ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರು.

ಕೊಹ್ಲಿಯನ್ನು ತಂಡದಿಂದ ಕಿತ್ತೊಗೆಯಬೇಕು ಎಂಬ ಒತ್ತಾಯಗಳ ಬೆನ್ನಲ್ಲೇ ಬಾಬರ್ ಕೊಹ್ಲಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಇದು ಭಾರೀ ವೈರಲ್ ಆಗಿತ್ತು.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ‘ಬಾಬರ್ ಟ್ವೀಟ್ ಗೆ ಕೊಹ್ಲಿ ಪ್ರತಿಕ್ರಿಯಿಸಬೇಕಿತ್ತು. ಆದರೆ ಅತ್ತ ಕಡೆಯಿಂದ ಅದು ಆಗುತ್ತದೆ ಎಂದು ನನಗನಿಸುತ್ತಿಲ್ಲ. ಬಹುಶಃ ಕೊಹ್ಲಿ ಪ್ರತಿಕ್ರಿಯಿಸಿದ್ದರೆ ಉಭಯ ದೇಶಗಳ ಕ್ರಿಕೆಟ್ ಬಾಂಧವ್ಯ ವೃದ್ಧಿಯಾಗುತ್ತಿತ್ತು’ ಎಂದು ಅಫ್ರಿದಿ ಆಕ್ಷೇಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಯನ್ನು ಯಾಕೆ ತಂಡದಿಂದ ಕಿತ್ತು ಹಾಕುತ್ತಿಲ್ಲ? ಸ್ಪೋಟಕ ವಿಚಾರ ಬಯಲು ಮಾಡಿದ ಇಂಗ್ಲೆಂಡ್ ಬೌಲರ್