Publish Date: Fri, 15 Jul 2022 (09:20 IST)
Updated Date: Fri, 15 Jul 2022 (09:28 IST)
ಮುಂಬೈ: ಕಳಪೆ ಫಾರ್ಮ್ ನಿಂದಾಗಿ ತೀವ್ರ ಒತ್ತಡದಲ್ಲಿರುವ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಾಕ್ ನಾಯಕ ಬಾಬರ್ ಅಜಮ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ಸಾಕಷ್ಟು ಪಂದ್ಯಗಳನ್ನಾಡಿದ್ದಾರೆ. ಹಲವು ವರ್ಷಗಳಿಂದ ಆಡಿದ್ದಾರೆ. ಅವರು ಶ್ರೇಷ್ಠ ಬ್ಯಾಟಿಗ. ಅವರಿಗೆ ತಂಡದಲ್ಲಿರಲು ಪ್ರತ್ಯೇಕ ಭರವಸೆ ಕೊಡಬೇಕಾಗಿಲ್ಲ ಎಂದಿದ್ದಾರೆ.
ಇನ್ನು ಪಾಕ್ ನಾಯಕ ಬಾಬರ್ ಅಜಮ್ ಕೂಡಾ ವಿರಾಟ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಕೊಹ್ಲಿಗೆ ಈ ಕಷ್ಟಕಾಲ ಹೋಗಿ ಒಳ್ಳೆ ದಿನ ಬಂದೇ ಬರುತ್ತದೆ ಎಂದಿದ್ದಾರೆ. ನಿನ್ನೆಯ ಪಂದ್ಯದಲ್ಲೂ 16 ರನ್ ಗೆ ಕೊಹ್ಲಿಗೆ ಔಟಾಗಿದ್ದರು.