ಲಂಡನ್: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಏಟಿಗೆ ಗ್ಯಾಲರಿಯಲ್ಲಿ ಕೂತಿದ್ದ ಮಗುವಿಗೆ ಗಾಯವಾಗಿತ್ತು.
ಈ ಮಗುವಿಗೆ ತಕ್ಷಣವೇ ಇಂಗ್ಲೆಂಡ್ ತಂದ ಫಿಸಿಯೋ ಬಳಿ ತೆರಳಿ ಪ್ರಾಥಮಿಕ ಚಿಕಿತ್ಸೆ ಮಾಡಿದ್ದರು. ಆದರೆ ಬಾಲಕಿಗೆ ಇನ್ನೊಂದು ಅದೃಷ್ಟ ಕಾದಿತ್ತು.
ತಾನು ಹೊಡೆದ ಸಿಕ್ಸರ್ ನಿಂದ ಗಾಯಗೊಂಡ ಬಾಲಕಿಯನ್ನು ಭೇಟಿ ಮಾಡಿರುವ ರೋಹಿತ್ ಶರ್ಮಾಗೆ ಆಕೆಗೆ ಚಾಕ್ಲೇಟ್, ಟೆಡ್ಡಿಬೇರ್ ಕೊಟ್ಟು ಸಮಾಧಾನಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.