ಡೆಂಗ್ಯೂ ಇದ್ದರೂ ನಾನು ಆಡಿದ್ದೆ, ನೀನೂ ಎದ್ದು ಮೈದಾನಕ್ಕಿಳಿ: ಶುಬ್ಮನ್ ಗಿಲ್ ಗೆ ಹುರಿದುಂಬಿಸಿದ ಯುವರಾಜ್

Webdunia
ಶುಕ್ರವಾರ, 13 ಅಕ್ಟೋಬರ್ 2023 (15:59 IST)
Photo Courtesy: Twitter
ಅಹಮ್ಮದಾಬಾದ್‍: ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಹತ್ವದ ಪಂದ್ಯವಿದೆ. ಆದರೆ ಈ ಪಂದ್ಯಕ್ಕೆ ಟೀಂ ಇಂಡಿಯಾ ಆರಂಭಿಕ ಶುಬ್ಮನ್ ಗಿಲ್ ಲಭ್ಯರಿರುತ್ತಾರಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಗಿಲ್ ಈಗಷ್ಟೇ ಚೇತರಿಸಿಕೊಂಡಿದ್ದಾರೆ. ನಿನ್ನೆ ಅಹಮ್ಮದಾಬಾದ್ ನಲ್ಲಿ ತಂಡದ ಜೊತೆ ನೆಟ್ ಪ್ರಾಕ್ಟೀಸ್ ಮಾಡಿದ್ದಾರೆ. ಹೀಗಾಗಿ ಅವರು ಆಡಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು.

ಈ ನಡುವೆ ಗಿಲ್ ಗೆ ಆಪ್ತರಾಗಿರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ‘ನಾನು ಡೆಂಗ್ಯೂ ಇದ್ದಾಗ ನಾಲ್ಕು ಬಾರಿ ಆಡಿದ್ದೆ. ಡೆಂಗ್ಯೂ ಇದೆ ಎಂದು ಹಿಂಜರಿಯಬೇಡ. ಎದ್ದು ಆಡಲು ಹೋಗು ಎಂದು ಗಿಲ್ ಗೆ ಹೇಳಿದ್ದೇನೆ’ ಎಂದು ಯುವಿ ಹೇಳಿಕೊಂಡಿದ್ದಾರೆ. ಹೀಗಾಗಿ ಗಿಲ್ ಇದನ್ನು ಸವಾಲಾಗಿ ತೆಗೆದುಕೊಂಡು ಕಣಕ್ಕಿಳಿಯುತ್ತಾರಾ ಕಾದು ನೋಡಬೇಕು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಸಿಸಿ ವಿಶ್ವಕಪ್‌ ತಂಡಕ್ಕೆ ಲಾರಾ ವೋಲ್ವಾರ್ಟ್‌ ಸಾರಥ್ಯ: ಕಪ್‌ ಗೆದ್ದರೂ ಹರ್ಮನ್‌ಗೆ ಸಿಗದ ಚಾನ್ಸ್‌

ಮುಟ್ಟಾದಾಗ ಮಹಿಳಾ ಕ್ರಿಕೆಟಿಗರು ಏನು ಮಾಡ್ತಾರೆ: ಶಾಕಿಂಗ್ ವಿಚಾರ ಹೇಳಿದ ಜೆಮಿಮಾ ರೊಡ್ರಿಗಸ್

ಪುರುಷರಿಗೊಂದು ಮಹಿಳೆಯರಿಗೊಂದು ನ್ಯಾಯನಾ.. ಬಿಸಿಸಿಐ ಮಾಡಿದ್ದು ಸರಿಯಿಲ್ಲ ಫ್ಯಾನ್ಸ್ ಆಕ್ರೋಶ

ಟ್ರೋಫಿ ಸ್ವೀಕರಿಸಲು ಬಂದ ಹರ್ಮನ್ ಪ್ರೀತ್ ಈ ನಡೆಯನ್ನು ಗೌರವಯುತವಾಗಿ ಬೇಡವೆಂದ ಜಯ್‌ ಶಾ

ಸೂರ್ಯಕುಮಾರ್‌ ಹೆಗಲಿಗೆ ಟಿ20 ನಾಯಕತ್ವ ಜವಾಬ್ದಾರಿ, ಕಾಪು ಮಾರಿಗುಡಿಗೆ ಪತ್ನಿ ಭೇಟಿ

ಮುಂದಿನ ಸುದ್ದಿ
Show comments