Webdunia - Bharat's app for daily news and videos

Install App

ಏಕದಿನ ವಿಶ್ವಕಪ್: ಭಾರತ-ಪಾಕ್ ಪಂದ್ಯಕ್ಕೆ ಮುನ್ನ ಭರ್ಜರಿ ಎಂಟರ್ ಟೈನ್ ಮೆಂಟ್

Webdunia
ಶುಕ್ರವಾರ, 13 ಅಕ್ಟೋಬರ್ 2023 (09:10 IST)
ಅಹಮ್ಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಎಲ್ಲರೂ ಎದಿರು ನೋಡುತ್ತಿದ್ದ ಭಾರತ-ಪಾಕಿಸ್ತಾನ ಪಂದ್ಯ ಇದೇ ಶನಿವಾರ ಗುಜರಾತ್ ನ ಅಹಮ್ಮದಾಬಾದ್ ಮೈದಾನದಲ್ಲಿ ನಡೆಯಲಿದೆ.

ಈ ಪಂದ್ಯಕ್ಕೆ ಈಗಾಗಲೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಸಾಂಪ್ರದಾಯಿಕ ಎದುರಾಳಿಗಳ ಪಂದ್ಯ ಭಾರತದಂತಹ ಕ್ರಿಕೆಟ್ ನ್ನು ಧರ್ಮದಂತೆ ಪ್ರೀತಿಸುವ ಪ್ರೇಕ್ಷಕರ ಮುಂದೆ ನಡೆಯುತ್ತಿರುವುದರಿಂದ ಉತ್ಸಾಹವೂ ಅದೇ ಮಟ್ಟದಲ್ಲಿದೆ.

ಈ ನಡುವೆ ವಿಶ್ವಕಪ್ ಆಯೋಜಕರಾಗಿರುವ ಬಿಸಿಸಿಐ ಈ ಪಂದ್ಯಕ್ಕೆ ವಿಶೇಷ ಕಳೆ ನೀಡಲು ಸಿದ್ಧತೆ ನಡೆಸಿದೆ. ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯದ ದಿನವೂ ಬಿಸಿಸಿಐ ಯಾವುದೇ ಮನರಂಜನಾ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಆದರೆ ಭಾರತ-ಪಾಕ್ ಪಂದ್ಯಕ್ಕೆ ಮುನ್ನ ಮನರಂಜನಾ ಕಾರ್ಯಕ್ರಮ ಆಯೋಜಿಸಿದೆ. ಮಧ‍್ಯಾಹ್ನ 12.40 ರಿಂದ 1.10 ರವರೆಗೆ ಬಾಲಿವುಡ್ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಬಾಲಿವುಡ್ ಸಿಂಗರ್ ಅರ್ಜಿತ್ ಸಿಂಗ್, ಶಂಕರ್ ಮಹದೇವನ್ ಮುಂತಾದವರು ತಮ್ಮ ಹಾಡಿನ ಮೂಲಕ ಪ್ರೇಕ್ಷಕರ ಜೋಶ್ ಹೆಚ್ಚಿಸಲಿದ್ದಾರೆ. ಜೊತೆಗೆ ವಿಶ್ವಕಪ್ ಪಂದ್ಯಾವಳಿಗೆ ಬಿಸಿಸಿಐನಿಂದ ಗೋಲ್ಡನ್ ಟಿಕೆಟ್ ಗೌರವ ಪಡೆದಿದ್ದ ಸಚಿನ್ ತೆಂಡುಲ್ಕರ್, ರಜನೀಕಾಂತ್, ಅಮಿತಾಭ್ ಬಚ್ಚನ್ ಈ ಪಂದ್ಯದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ, ಕೊಹ್ಲಿ ಕಮ್ ಬ್ಯಾಕ್

ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾಗೆ ಕೊಕ್: ಈಡೇರದೇ ಹೋಯ್ತಾ ಆ ಕನಸು

IND vs WI Test: ಜಡೇಜ ದಾಳಿಗೆ ಕುಸಿದ ವಿಂಡೀಸ್: ಶುಭಮನ್‌ ನಾಯಕತ್ವಕ್ಕೆ ತವರಿನಲ್ಲಿ ಮೊದಲ ಜಯ

ಸಾನಿಯಾ ಮಿರ್ಜಾ ಬಳಿಕ ಮೂರನೇ ಪತ್ನಿಗೂ ಶೊಯೇಬ್ ಮಲಿಕ್ ಸೋಡಾ ಚೀಟಿ

ಪುರುಷರಿಂದ ಆಗಲಿಲ್ಲ ನೀವಾದ್ರೂ ಭಾರತವನ್ನು ಸೋಲಿಸಿ: ಪಾಕಿಸ್ತಾನ ಮಹಿಳಾ ಕ್ರಿಕೆಟಿಗರಿಗೆ ಮೊಹ್ಸಿನ್ ನಖ್ವಿ ಆರ್ಡರ್

ಮುಂದಿನ ಸುದ್ದಿ
Show comments