ಯೂತ್‌ ಟೆಸ್ಟ್‌: ಆಸ್ಟ್ರೇಲಿಯಾ ನೆಲದಲ್ಲೂ ಅಬ್ಬರಿಸಿ ಬೊಬ್ಬಿರಿದ 14ರ ಪೋರ ವೈಭವ್ ಸೂರ್ಯವಂಶಿ

Sampriya
ಬುಧವಾರ, 1 ಅಕ್ಟೋಬರ್ 2025 (15:05 IST)
Photo Credit X
‌‌‌ಬ್ರಿಸ್ಬೇನ್: ಭಾರತದ 14 ವರ್ಷದ ಪೋರ ವೈಭವ್ ಸೂರ್ಯವಂಶಿ ಸಿಡಿಲಬ್ಬರ ಮುಂದುವರೆದಿದೆ. ಆಸ್ಟ್ರೇಲಿಯಾ ನೆಲದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಿಂಚಿನ ಶತಕ ಬಾರಿಸಿದ್ದಾರೆ. 

ವೈಭವ್ ಸೂರ್ಯವಂಶಿ ಐಪಿಎಲ್​ನಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ 11 ಸಿಕ್ಸ್​ ಹಾಗೂ 7 ಫೋರ್​ಗಳೊಂದಿಗೆ 101 ರನ್ ಬಾರಿಸಿದ್ದರು.  

ಇದೀಗ ಯೂತ್‌ ಟೆಸ್ಟ್‌ನಲ್ಲಿ ಮಿಂಚು ಹರಿಸಿದ್ದಾರೆ. ಭಾರತ ಅಂಡರ್-19 ಮತ್ತು ಆಸ್ಟ್ರೇಲಿಯಾ ಅಂಡರ್-19 ತಂಡಗಳ ನಡುವೆ ಯೂತ್ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಸೂರ್ಯವಂಶಿ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ.

ಬ್ರಿಸ್ಬೇನ್​ನ ಹಿಯಾನ್ ಹೀಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್​ನಲ್ಲಿ 243 ರನ್​ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಭಾರತ ಅಂಡರ್ 19 ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದ್ದರು.

86 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ 8 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 113 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ವೈಭವ್ ಅವರ ಈ ವೈಭೋವಪೇತ ಇನಿಂಗ್ಸ್​ನಿಂದಾಗಿ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ 300+ ರನ್​ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli birthday: ಎಂಜಿ ರೋಡ್ ನಲ್ಲಿ ಮೊದಲು ಟ್ಯಾಟೂ ಹಾಕಿಸಿದ್ದ ಕೊಹ್ಲಿ ಆಮೇಲೆ ಮುಚ್ಚಿಟ್ಟಿದ್ದು ಯಾಕೆ

ತಿಲಕ ಬೇಡ ಎಂದ ಸ್ಮೃತಿ ಮಂಧಾನ: ಯಾಕೆ ಹೀಗೆ ನೆಟ್ಟಿಗರ ಪ್ರಶ್ನೆ: video

ಜಯ್ ಶಾ ಎಂದ್ರೆ ಸುಮ್ನೇ ಅಲ್ಲ, ಮಹಿಳಾ ಕ್ರಿಕೆಟ್ ತಾರೆಯರಿಗೆ ಇದಕ್ಕೇ ಜಯ್ ಶಾ ಮೆಲೆ ಪ್ರೀತಿ

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

ಹರ್ಮನ್ ಪ್ರೀತ್ ಕೌರ್ ಪಡೆಗಿಲ್ಲ ವಿಕ್ಟರಿ ಪೆರೇಡ್ ಭಾಗ್ಯ: ಇದಕ್ಕೆಲ್ಲಾ ಬೆಂಗಳೂರೇ ಕಾರಣ

ಮುಂದಿನ ಸುದ್ದಿ
Show comments