Webdunia - Bharat's app for daily news and videos

Install App

ಪಾನಿಪೂರಿ ಮಾರುತ್ತಿದ್ದ ಯಶಸ್ವಿ ಜೈಸ್ವಾಲ್ ಬಳಿ ಈಗ ಇದೆ ದುಬಾರಿ ಮನೆ

Krishnaveni K
ಗುರುವಾರ, 22 ಫೆಬ್ರವರಿ 2024 (11:09 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಯಂಗ್ ಸೆನ್ಸೇಷನ್ ಯಶಸ್ವಿ ಜೈಸ್ವಾಲ್ ಜೀವನ ಮುಂದಿನ ತಲೆಮಾರಿನವರಿಗೆ ಸ್ಪೂರ್ತಿದಾಯಕ ಕತೆಯಾಗಿರುತ್ತದೆ.

ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲಿ ಜೈಸ್ವಾಲ್ ಸತತ ಎರಡು ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಅವರನ್ನು ಮಾಜಿ ಕ್ರಿಕೆಟಿಗರಾದ ಡಾನ್ ಬ್ರಾಡ್ಮನ್, ಸಚಿನ್ ತೆಂಡುಲ್ಕರ್ ಮುಂತಾದ ದಿಗ್ಗಜರಿಗೆ ಹೋಲಿಕೆ ಮಾಡುತ್ತಿದ್ದಾರೆ. ಜೈಸ್ವಾಲ್ ರ ಸದ್ಯದ ಆಟ ನೋಡುತ್ತಿದ್ದರೆ ಅವರು ಭವಿಷ್ಯದಲ್ಲಿ ಭಾರತದ ಮತ್ತೊಬ್ಬ ದಿಗ್ಗಜ ಆಟಗಾರನ ಸಾಲಿಗೆ ಸೇರ್ಪಡೆಯಾಗುವುದು ಖಚಿತ.

ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುವ ಯಶಸ್ವಿ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಜೈಸ್ವಾಲ್ ಕ್ರಿಕೆಟ್ ಕಿಟ್ ತೆಗೆದುಕೊಳ್ಳಲೂ ಕಷ್ಟಪಟ್ಟಿದ್ದರು. ತಂದೆ ಪಾನಿಪೂರಿ ಮಾರುತ್ತಿದ್ದರೆ ಜೈಸ್ವಾಲ್ ಕೂಡಾ ಅವರಿಗೆ ಸಾಥ್ ನೀಡುತ್ತಿದ್ದರು. ಅವರು ಪಾನಿ ಹಾಕಿಕೊಡುತ್ತಿರುವ ವಿಡಿಯೋಗಳು ಈಗಲೂ ಸೋಷಿಯಲ್ ಮೀಡಿಯಾದಲ್ಲಿದೆ.

ತೀರಾ ಬಡತನದಿಂದ ಟೆಂಟ್ ನಲ್ಲಿ ವಾಸವಾಗಿದ್ದ ಜೈಸ್ವಾಲ್ ಇಂದು ಐದು ಬೆಡ್ ರೂಂಗಳ ಐಷಾರಾಮಿ ಮನೆಯ ಒಡೆಯ. ಕಳೆದ ವರ್ಷವಷ್ಟೇ ಜೈಸ್ವಾಲ್ ತಮ್ಮ ಸ್ವಂತ ಸಂಪಾದನೆಯಿಂದ ಮುಂಬೈನಲ್ಲಿ 15,000 ಚದರ ಅಡಿ ಇರುವ ಫರ್ನಿಶ್ ಆಗಿರುವ ಮನೆಯನ್ನು ಖರೀದಿಸಿದ್ದರು.

ಕ್ರಿಕೆಟ್ ನಲ್ಲಿ ಜನಪ್ರಿಯರಾದ ಮೇಲೆ ಜೈಸ್ವಾಲ್ ಗೆ ಬೂಸ್ಟ್, ಜೆಬಿಎಲ್ ಇಂಡಿಯಾ ಮುಂತಾದ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಜಾಹೀರಾತು ಒಪ್ಪಂದ ಸಿಕ್ಕಿದೆ. ಹೀಗಾಗಿ ಜೈಸ್ವಾಲ್ ತಮ್ಮ ಕುಟುಂಬಸ್ಥರನ್ನು ತಮ್ಮ ಐಷಾರಾಮಿ ಫ್ಲ್ಯಾಟ್ ನಲ್ಲಿರಿಸಿ ಕೊಂಚವೂ ಕಷ್ಟ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಇದಲ್ಲವೇ ನಿಜವಾದ ಯಶಸ್ಸು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ವಿರಾಟ್ ಕೊಹ್ಲಿ 7 ವರ್ಷದ ಹಳೆಯ ಟ್ವೀಟ್ ವೈರಲ್: ಅಂತಹದ್ದೇನಿದೆ ಅದರಲ್ಲಿ

ಮುಂದಿನ ಸುದ್ದಿ
Show comments