Select Your Language

Notifications

webdunia
webdunia
webdunia
webdunia

ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ ಪತ್ರಕರ್ತನಿಗೆ 2 ವರ್ಷ ನಿಷೇಧ

ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ ಪತ್ರಕರ್ತನಿಗೆ 2 ವರ್ಷ ನಿಷೇಧ
ಮುಂಬೈ , ಗುರುವಾರ, 5 ಮೇ 2022 (05:30 IST)
ಮುಂಬೈ: ಸಂದರ್ಶನ ನೀಡದ ಕಾರಣಕ್ಕೆ ಬೆದರಿಕೆ ಹಾಕಿದ್ದ ಪತ್ರಕರ್ತ ಬೋರಿಯಾ ಮಜುಂದಾರ್ ಗೆ ಬಿಸಿಸಿಐ ಎರಡು ವರ್ಷಗಳ ನಿಷೇಧ ವಿಧಿಸಿದೆ.

ಬೊರಿಯಾ ಮಜುಂದಾರ್ ಗೆ ಮುಂದಿನ ಎರಡು ವರ್ಷ ಭಾರತದ ಪರ ನೊಂದಾಯಿತ ಯಾವುದೇ ಕ್ರಿಕೆಟಿಗರನ್ನು ಸಂದರ್ಶನ ಮಾಡುವುದರಿಂದ ನಿರ್ಬಂಧಿಸಲಾಗಿದೆ. ಅಲ್ಲದೆ ಎರಡು ವರ್ಷ ಕ್ರಿಕೆಟಿಗರ ಸಂದರ್ಶನ ನಡೆಸುವುದು, ಬಿಸಿಸಿಐಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ನಿಷೇಧ ಹೇರಲಾಗಿದೆ.

ಟೀಂ ಇಂಡಿಯಾಗೆ ಆಯ್ಕೆಯಾಗದ ಬಗ್ಗೆ ವೃದ್ಧಿಮಾನ್ ಸಹಾ ಪ್ರತಿಕ್ರಿಯೆ ಕೇಳಿದಾಗ ಅವರು ಪ್ರತಿಕ್ರಿಯಿಸಲಿಲ್ಲ ಎಂಬ ಕಾರಣಕ್ಕೆ ಮಜುಂದಾರ್ ವ್ಯಾಟ್ಸಪ್ ಸಂದೇಶ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅನೇಕ ಕ್ರಿಕೆಟಿಗರೂ ಕೋರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಚೆನ್ನೈ ವಿರುದ್ಧ ಆರ್ ಸಿಬಿಗೆ ರೋಚಕ ಗೆಲುವು