ಮುಂಬೈ: ಡಬ್ಲ್ಯುಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಯುಪಿ ವಾರಿಯರ್ಸ್ ವಿರುದ್ಧ ಆಡಲಿದೆ.
ಈಗಾಗಲೇ ಆರ್ ಸಿಬಿ ಐದು ಸೋಲು ಕಂಡಿದೆ. ಹೀಗಾಗಿ ಈ ಟೂರ್ನಿಯಿಂದ ಹೊರಬಿದ್ದಂತೆಯೇ. ಹೀಗಾಗಿ ಇಂದಿನ ಪಂದ್ಯದ ಫಲಿತಾಂಶ ಕೇವಲ ಪ್ರತಿಷ್ಠೆಯ ವಿಚಾರವಷ್ಟೇ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲುವ ಕೊನೆಯ ಅವಕಾಶವಿರುವುದು ಯುಪಿ ವಾರಿಯರ್ಸ್ ವಿರುದ್ಧ ಮಾತ್ರ. ಅದನ್ನೂ ಕಳೆದುಕೊಂಡರೆ ಸ್ಮೃತಿ ಮಂಧನಾ ಪಡೆಗೆ ತೀರಾ ಮುಖಭಂಗವಾಗಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.